ಮಡಿಕೇರಿ, ಡಿ. ೨೭: ನಗರಸಭೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ವಾರ್ಡ್ ೧೬ರ ನಿವಾಸಿಗಳ ಅರ್ಜಿ ವಿಲೇವಾರಿಗೆ ನಗರಸಭಾ ಸದಸ್ಯ ಬಿ.ವೈ. ರಾಜೇಶ್ ಕ್ರಮ ಕೈಗೊಂಡಿದ್ದಾರೆ.
ನಮೂನೆ ೩ ರ ಅರ್ಜಿ, ಖಾತಾ ವರ್ಗಾವಣೆ, ಕಂದಾಯ ಪಾವತಿ, ತೆರಿಗೆ ಪಾವತಿ, ಅಂಗಡಿಗಳ ಪರವಾನಗಿ ನವೀಕರಣ, ಕಟ್ಟಡ ನಿರ್ಮಾಣಕ್ಕೆ ಅನುಮತಿ, ಕಟ್ಟಡ ಕಾಮಗಾರಿ ಪೂರ್ಣಗೊಂಡ ವರದಿ ಸೇರಿದಂತೆ ಇನ್ನಿತರ ಯಾವುದೇ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದಲ್ಲಿ ಸಂಬAಧಿಸಿದ ಅರ್ಜಿದಾರರು ತಾ. ೨೯ ರೊಳಗೆ ಅರ್ಜಿಗಳ ಪ್ರತಿಯೊಂದಿಗೆ ತಮ್ಮ ಗಮನಕ್ಕೆ ತರುವಂತೆ ರಾಜೇಶ್ ಮನವಿ ಮಾಡಿದ್ದಾರೆ. ಕಡತಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಿ.ವೈ. ರಾಜೇಶ್ ಮೊ.ಸಂ : ೯೬೧೧೪ ೮೭೩೧೫