ಸೋಮವಾರಪೇಟೆ, ಡಿ. ೨೭: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ನೇತೃತ್ವದಲ್ಲಿ, ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹೃದಯ ಸಾಕ್ಷಾತ್ಕಾರ’ ಶಿಬಿರದಲ್ಲಿ ೫೫ ಮಂದಿ ರಕ್ತದಾನ ಮಾಡಿದರೆ, ೩೫ ಮಂದಿ ನೇತ್ರದಾನ ಹಾಗೂ ೧೧ ಮಂದಿ ದೇಹದಾನಕ್ಕೆ ಹೆಸರು ನೋಂದಾಯಿಸಿಕೊAಡರು.

ಕಾರ್ಯಕ್ರಮವನ್ನು ಮಡಿಕೇರಿಯ ರಕ್ತನಿಧಿ ಕೇಂದ್ರದ ವೈದ್ಯರಾದ ಕರುಂಬಯ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ದಾನಗಳಲ್ಲಿ ರಕ್ತದಾನ ಮಹತ್ವದದ್ದು. ಇದರಿಂದಾಗಿ ಹಲವರ ಜೀವ ಉಳಿಸಲು ಸಹಕಾರಿ. ಕೋವಿಡ್ ನಿಂದಾಗಿ ರಕ್ತದಾನ ಶಿಬಿರಗಳು ನಡೆಯದ ಕಾರಣ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಕಾಡುತ್ತಿತ್ತು. ಮಾಸಿಕ ೨೫೦ ಯೂನಿಟ್ ರಕ್ತದ ಅವಶ್ಯಕತೆ ಇದ್ದು, ಸಂಘ ಸಂಸ್ಥೆಗಳು ಹೆಚ್ಚಾಗಿ ಇಂತಹ ಶಿಬಿರ ಆಯೋಜನೆ ಮಾಡಿದರೆ ರಕ್ತದ ಕೊರತೆಯನ್ನು ನೀಗಿಸಬಹುದು ಎಂದರು.

ಆರೋಗ್ಯವAತರು ೬೫ ವರ್ಷದವರೆಗೆ ಮೂರು ತಿಂಗಳಿನಿAದ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ದಾನಿಗಳು ರಕ್ತದಾನ ಮಾಡಿದ ೨೪ ಗಂಟೆಯೊಳಗೆ ಅವರ ದೇಹದಲ್ಲಿ ರಕ್ತ ಮರುಪೂರಣ ವಾಗುವುದರಿಂದ ಯಾವುದೇ ಭಯವಿಲ್ಲದೆ, ರಕ್ತದಾನ ಮಾಡಲು ಮುಂದಾಗಬಹುದು ಎಂದು ಮಾಹಿತಿ ನೀಡಿದರು.

ಮಡಿಕೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತಜ್ಞರಾದ ಶಶಾಂಕ್ ಮಾತನಾಡಿ, ಮರಣದ ನಂತರ ದೇಹ ದಾನ ಮಾಡುವುದ ರಿಂದ ವೈದ್ಯಕೀಯ ವಿದ್ಯಾರ್ಥಿಗಳ ಮೊದಲ ವರ್ಷದ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಾಗು ವುದು. ದೇಹ ದಾನ ಮಾಡುವವರು ಮೊದಲೇ ತಮ್ಮ ನೋಂದಣಿ ಮಾಡಿಸಿಕೊಳ್ಳಬೇಕು. ಮೃತಪಟ್ಟ ೬ ಗಂಟೆಯೊಳಗೆ ದೇಹವನ್ನು ಆಸ್ಪತ್ರೆಯ ಸುಪರ್ಧಿಗೆ ನೀಡಬೇಕು. ತಡವಾದಲ್ಲಿ ತಕ್ಷಣ ಶೀಥಲಪೆಟ್ಟಿಗೆಯಲ್ಲಿಟ್ಟು ನಂತರ ನೀಡಬಹುದಾಗಿದೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಮೆದುಳು ನಿಷ್ಕಿçಯಗೊಂಡು ಬದುಕಲು ಸಾಧ್ಯವಿಲ್ಲದ ಸಂದರ್ಭ ದೇಹದ ಅಂಗಾAಗಗಳನ್ನು ನೀಡಬಹುದಾಗಿದೆ ಎಂದರು.

ಕಣ್ಣಿನ ತಜ್ಞರಾದ ಸುಹಾನ್ ಅವರು, ಕಣ್ಣಿನ ದಾನದ ಬಗ್ಗೆ ಮತ್ತು ಅದರ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ೨೦೧೧ರ ಗಣತಿಯಂತೆ ದೇಶದಲ್ಲಿ ೬೫ ಲಕ್ಷ ಅಂಧರು ಇದ್ದಾರೆ. ರಾಜ್ಯದಲ್ಲಿ ೨.೫೦ ಲಕ್ಷ ಮಂದಿ ಇದ್ದು, ಒಬ್ಬರು ಕಣ್ಣಿನ ದಾನ ಮಾಡಿದಲ್ಲಿ ಅದರಿಂದ ಕನಿಷ್ಟ ಇಬ್ಬರಿಗೆ ದೃಷ್ಟಿ ನೀಡಬಹುದು. ಸಾಮಾನ್ಯವಾಗಿ ೧೮ ವರ್ಷ ಮೇಲ್ಪಟ್ಟು, ೯೦ ವರ್ಷದವರೆಗಿನ ಆರೋಗ್ಯವಂತ ಕಣ್ಣುಗಳನ್ನು ದಾನ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರವೀಂದ್ರ ವಹಿಸಿದ್ದರು. ವೇದಿಕೆಯಲ್ಲಿ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಮಂಜುಳ, ಕಾನೂನು ಸಲಹೆ ಗಾರರಾದ ರೂಪ ಉಪಸ್ಥಿತರಿದ್ದರು.