ಮಡಿಕೇರಿ, ಡಿ. ೨೭: ಶ್ರೀಮಂಗಲ ನಾಡ್ ಕೊಡವ ಸಮಾಜದ ಮೈದಾನದಲ್ಲಿ ತಾ. ೨೬ರ ಭಾನುವಾರ ದಿನವಿಡೀ ಗುಂಡಿನ ಶಬ್ಧದ ಭೋರ್ಗರೆತ ಮಾರ್ಧನಿಸಿತ್ತು. ಟಿ. ಶೆಟ್ಟಿಗೇರಿ ಹಾಗೂ ಶ್ರೀಮಂಗಲ ಶೂರ‍್ಸ್ ಕ್ಲಬ್‌ನ ವತಿಯಿಂದ ಆಯೋಜಿಸಲಾಗಿದ್ದ ‘ತೋಕ್ ನಮ್ಮೆ-೨೦೨೧’ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಭಾರೀ ರೋಮಾಂಚಕಾರಿಯಾಗಿ ಜರುಗಿತು. ದಾಖಲೆ ಎಂಬAತೆ ಈ ಬಾರಿ ನಡೆದ ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳು, ಇಳಿವಯಸ್ಸಿನವರು ಸೇರಿದಂತೆ ಒಟ್ಟು ೬೪೫ ಸ್ಪರ್ಧಿಗಳು ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಿಂದ ಪಾಲ್ಗೊಂಡಿದ್ದರು. ಕೊಡಗಿನ ಸ್ಪರ್ಧಿಗಳೊಂದಿಗೆ, ಚಾಮರಾಜನಗರ, ಪುತ್ತೂರು, ಕಾರ್ಕಳ, ಮಂಡ್ಯ, ಕುಕ್ಕೆಸುಬ್ರಹ್ಮಣ್ಯ, ಬೆಂಗಳೂರು ಕಡೆಯಿಂದಲೂ ಶೂಟಿಂಗ್ ಆಸಕ್ತರು ಸ್ಪರ್ಧೆಯಲ್ಲಿ ಭಾಗಿಗಳಾಗಿದ್ದರು.

(ಮೊದಲ ಪುಟದಿಂದ)

.೨೨, ೧೨ನೇ ಬೋರ್, ಏರ್‌ವಿಭಾಗದಲ್ಲಿ ನಡೆದ ಸ್ಪರ್ಧೆ ತೀರಾ ಪೈಪೋಟಿಯಿಂದ ಕೂಡಿತ್ತು. ವಿಶೇಷವಾಗಿ ಏರ್‌ಗನ್‌ನಲ್ಲಿ ಕೋಳಿಮೊಟ್ಟೆಗೆ ಗುಂಡು ಹೊಡೆಯವ ಸ್ಪರ್ಧೆ ಗಮನ ಸೆಳೆಯಿತು. ಸಂಜೆ ೬ರ ತನಕವೂ ಗುಂಡಿನ ಸ್ಪರ್ಧೆ ಮುಂದುವರಿದಿತ್ತು.

.೨೨ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಮರ‍್ನಾಲ್ಕು ಸುತ್ತಿನಲ್ಲಿ ವಿಜೇತರ ನಿರ್ಧಾರವಾದರೆ ೧೨ನೇ ಬೋರ್ ವಿಭಾಗದಲ್ಲಿ ವಿಜೇತರ ನಿರ್ಧಾರಕ್ಕೆ ೧೨ ಸುತ್ತಿನ ಪೈಪೋಟಿ ನಡೆದಿದ್ದು ವಿಶೇಷವಾಗಿತ್ತು.

೧೨ನೇ ಬೋರ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅತ್ಯಂತ ಹಿರಿಯ ಸ್ಪರ್ಧಾಳು ೭೮ರ ವಯೋಮಾನದ ಅಪ್ಪಂಡೇರAಡ ಪೆಮ್ಮಯ್ಯ ಅವರು ಮೂರನೇ ಬಹುಮಾನವನ್ನು ತಮ್ಮದಾಗಿಸಿಕೊಂಡು ಗಮನ ಸೆಳೆದರೆ, ಕಿರಿಯ ಸ್ಪರ್ಧಿಗಳಾಗಿ ೭ ವರ್ಷದ ಕೋಟ್ರಮಾಡ ಪೂವಣ್ಣ, ೧೧ ವರ್ಷದ ಮಚ್ಚಾಮಾಡ ಸುಮನ್ ಮಂದಣ್ಣ ಪಾಲ್ಗೊಂಡಿದ್ದರು. .೨೨ ವಿಭಾಗದಲ್ಲಿ ೩೦೮, ೧೨ನೇ ಬೋರ್‌ನಲ್ಲಿ ೨೯೪, ಏರ್‌ಗನ್‌ನಲ್ಲಿ ೭೪, ಏರ್‌ಗನ್ ಮಹಿಳೆಯರ ಮತ್ತು ಮಕ್ಕಳ ವಿಭಾಗದಲ್ಲಿ ೧೫ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಕೋವಿಪೂಜೆ

ಬೆಳಿಗ್ಗೆ ಕೋವಿಪೂಜೆಯೊಂದಿಗೆ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಉದ್ಘಾಟನೆಯನ್ನು ಸ್ಥಳೀಯ ಪ್ರಮುಖರಾದ ಮಚ್ಚಾಮಾಡ ಡಾಲಿ ಚಂಗಪ್ಪ ಹಾಗೂ ಕೋಟ್ರಂಗಡ ಎಂ. ಸುಬ್ರಮಣಿ ಅವರುಗಳು ಉದ್ಘಾಟಿಸಿದರು. ಶೂರ‍್ಸ್ ಕ್ಲಬ್‌ನ ಅಧ್ಯಕ್ಷರಾದ ತಡಿಯಂಗಡ ಕಂಬ ಕರುಂಬಯ್ಯ, ಉಪಾಧ್ಯಕ್ಷ ಕೋಟ್ರಮಾಡ ಮಂಜು ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಸ್ಪರ್ಧೆಯ ಆಯೋಜನೆಯಲ್ಲಿ ಶ್ರಮಿಸಿದರು.

ವಿಜೇತರ ವಿವರ

.೨೨ ವಿಭಾಗದಲ್ಲಿ : ಅಜ್ಜೇಟಿರ ಗೌತಮ್ ಪ್ರಥಮ, ಪುತ್ತರಿರ ನಂಜಪ್ಪ ದ್ವಿತೀಯ, ಮಣವಟ್ಟಿರ ಪೊನ್ನು ತೃತೀಯ ಬಹುಮಾನ ಗಳಿಸಿದರು. ಪ್ರಥಮ ರೂ. ೨೫ ಸಾವಿರ, ದ್ವಿತೀಯ ರೂ. ೧೫ ಸಾವಿರ ಹಾಗೂ ತೃತೀಯ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.

೧೨ನೇ ಬೋರ್ : ೧೨ನೇ ಬೋರ್ ವಿಭಾಗದ ಸ್ಪರ್ಧೆಯಲ್ಲಿ ಕುಂಞಮಾಡ ಕಾವೇರಪ್ಪ ಪ್ರಥಮ, ನೆಲ್ಲೀರ ಧನು ದ್ವಿತೀಯ ಹಾಗೂ ಅಪ್ಪಂಡೇರAಡ ಪೆಮ್ಮಯ್ಯ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ತಲಾ ರೂ. ೨೦ ಸಾವಿರ, ರೂ. ೧೫ ಸಾವಿರ ಹಾಗೂ ರೂ.೭,೫೦೦ ನಗದು ಹಾಗೂ ಟ್ರೋಫಿ ನೀಡಲಾಯಿತು.

ಏರ್‌ಗನ್ : ಏರ್‌ಗನ್ ವಿಭಾಗದಲ್ಲಿ ಕೇಚಿರ ಶಬ್ದ ಪ್ರಥಮ, ಕೈಬುಲಿರ ದಿಯಾ ಪೂವಮ್ಮ ದ್ವಿತೀಯ ಹಾಗೂ ಬಡುವಂಡ ತ್ರಿಶಾಲಿ ತಂಗಮ್ಮ ತೃತೀಯ ಸ್ಥಾನದೊಂದಿಗೆ ರೂ. ೫ ಸಾವಿರ, ರೂ. ೩ ಸಾವಿರ ಹಾಗೂ ರೂ. ೨ ಸಾವಿರ ನಗದು ಹಾಗೂ ಟ್ರೋಫಿ ಗಳಿಸಿದರು.