ಮರಗೋಡು, ಡಿ. ೨೮: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಟ್ಟೆಮಾಡು ಗ್ರಾಮದ ಕಿಂಗ್ಫಿಶರ್ ಎಫ್ಸಿ ತಂಡ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಕಿಂಗ್ಫಿಶರ್ ತಂಡ ಪಾಲಿಬೆಟ್ಟದ ನೆಹರೂ ಎಫ್ಸಿ ತಂಡವನ್ನು ರೋಚಕ ಹೋರಾಟದಲ್ಲಿ ೪-೩ ಗೋಲುಗಳ ಅಂತರದಿAದ ಮಣಿಸಿ ಪ್ರಶಸ್ತಿ ಜಯಿಸಿತು. ದಟ್ಟ ಮಂಜಿನ ಮಬ್ಬುಗತ್ತಲೆಯಲ್ಲಿ ನಡೆದ ಫೈನಲ್ ಹೋರಾಟ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಬೆಂಗಳೂರಿನ ಅತಿಥಿ ಆಟಗಾರರನ್ನೇ ಒಳಗೊಂಡಿದ್ದ ಕಟ್ಟೆಮಾಡು ತಂಡ ಸ್ಥಳೀಯ ನೆಹರೂ ಎಫ್ಸಿ ತಂಡದ ಜೊತೆ ಅಕ್ಷರಶಃ ಜಿದ್ದಾಜಿದ್ದಿನ ಹೋರಾಟ ನಡೆಸಿತು.

ನೆಹರೂ ತಂಡದ ಪ್ರತಿಭಾವಂತ ಆಟಗಾರ ಪ್ರವೀಣ್ ಪಂದ್ಯ ಆರಂಭವಾದ ಕೇವಲ ೧೦ ಸೆಕೆಂಡ್‌ಗಳಲ್ಲಿ ಕಲಾತ್ಮಕ ಗೋಲು ದಾಖಲಿಸಿ ಇಡೀ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು.

ಇದಾಗಿ ಮತ್ತೆರಡು ನಿಮಿಷಗಳಲ್ಲಿ ಮತ್ತೊಂದು ಗೋಲು ದಾಖಲಿಸಿದ ನೆಹರೂ ತಂಡ ಬೆಂಗಳೂರು ಹುಡುಗರನ್ನು ಕಕ್ಕಾಬಿಕ್ಕಿಯನ್ನಾಗಿಸಿತು. ಆದರೆ ಪುಟಿದೆದ್ದ ಬೆಂಗಳೂರು ಆಟಗಾರರು ಪ್ರತಿ ಹೋರಾಟ ನಡೆಸಿ ಸಮಬಲ ಸಾಧಿಸಿದರು. ಕೊನೆಗೆ ೪-೩ ಗೋಲುಗಳ ಅಂತರದಿAದ ಕಿಂಗ್ಫಿಶರ್ ತಂಡ ಜಯದ ನಗೆ ಬೀರಿತು. ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದರೂ ನೆಹರೂ ಎಫ್ಸಿ ತಂಡದ ಯುವ ಆಟಗಾರರು ತಮ್ಮ ಆಕರ್ಷಕ ಆಟದಿಂದಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಿಂಗ್ಫಿಶರ್ ತಂಡ, ಮರಗೋಡಿನ ಎಂಎಆರ್ಸಿ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ೬-೫ ಗೋಲುಗಳ ಅಂತರದಿAದ ಜಯದಾಖಲಿಸಿತು. ಮತ್ತೊಂದು ಸೆಮಿಫೈಲ್‌ನಲ್ಲ್ಲಿ ಸಾಕರ್ ಬಾಯ್ಸ್ ಕಟ್ಟೆಮಾಡು ತಂಡದ ವಿರುದ್ಧ ಜಯ ಸಾಧಿಸಿದ ನೆಹರೂ ಎಫ್ಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಚಾಂಪಿಯನ್ ಕಿಂಗ್ಫಿಶರ್ ತಂಡ ೪೦ ಸಾವಿರ ನಗದು ಮತ್ತು ಟ್ರೋಫಿ ಪಡೆದರೆ, ರನ್ನರ್ ಅಪ್ ನೆಹರೂ ತಂಡ ೨೦ ಸಾವಿರ ನಗದು ಮತ್ತು ಟ್ರೋಫಿ ಗೆದ್ದುಕೊಂಡಿತು. ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ ತಲಾ ಐದು ಸಾವಿರ ನಗದು ಬಹುಮಾನ ನೀಡಲಾಯಿತು.

ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ಕಿಂಗ್ಫಿಶರ್ ತಂಡದ ಶರವಣ ಪ್ರಶಸ್ತಿ ಪಡೆದರು. ನೆಹರೂ ಎಫ್ಸಿ ತಂಡದ ಪ್ರವೀಣ್ ಅತ್ಯಧಿಕ ಗೋಲು ದಾಖಲಿಸಿದ ಸಾಧನೆ ಮಾಡಿದರು.

ಅತ್ಯುತ್ತಮ ರಕ್ಷಣಾ ಆಟಗಾರನಾಗಿ ಕಿಂಗ್ಫಿಶರ್ ತಂಡದ ಯೋಗಿ ಪ್ರಶಸ್ತಿ ಪಡೆದುಕೊಂಡರು. ಸರಣಿಯ ಅತ್ಯುತ್ತಮ ತಂಡವಾಗಿ ಸಾಕರ್ ಬಾಯ್ಸ್ ಕಟ್ಟೆಮಾಡು ಆಯ್ಕೆಯಾಯಿತು.

ಫೈನಲ್ ಪಂದ್ಯವನ್ನು ಬೆಂಗಳೂರಿನ ಉದ್ಯಮಿ ದಿವಿಕ್ ಸುಬ್ಬಯ್ಯ ಚೆಂಡು ಒದೆಯುವ ಮೂಲಕ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಚಿತ್ರ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಅವರನ್ನು ಸನ್ಮಾನಿಸಲಾಯಿತು.