ಮಡಿಕೇರಿ, ಡಿ. ೨೮: ಭಾರತ ಸರ್ಕಾರವು ೨೦೧೯ ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸೌಲಭ್ಯವನ್ನು ಮೀನುಗಾರಿಕೆ ಚಟುವಟಿಕೆ ಹಾಗೂ ಮೀನು ಕೃಷಿಕರಿಗೂ ವಿಸ್ತರಣೆ ಮಾಡಿ ಘೋಷಿಸಿದೆ. ಈ ಯೋಜನೆಯಡಿ ಮೀನು ಕೃಷಿಕರಿಗೆ ಅಲ್ಪಾವಧಿ ದುಡಿಯುವÀ ಬಂಡವಾಳ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವ ಗುರಿ ಹೊಂದಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರಿಕೆಗಾಗಿ ರೂ. ೨ ಲಕ್ಷಗಳವರೆಗೆ ಸಾಲದ ಮಿತಿಯನ್ನು ನಿಗದಿಪಡಿಸಲಾಗಿದೆ.

ಮೀನುಗಾರರು, ಮೀನು ಕೃಷಿಕರು (ವೈಯಕ್ತಿಕ ಮತ್ತು ಗುಂಪುಗಳು/ ಪಾಲುದಾರರು/ ಹಂಚಿಕೆದಾರರು ಹಿಡುವಳಿದಾರರು) ಸ್ವಸಹಾಯ ಗುಂಪುಗಳು, ಜಂಟಿ ಹೊಣೆಗಾರಿಕೆ ಗುಂಪುಗಳು ಮತ್ತು ಮಹಿಳಾ ಗುಂಪುಗಳು ಕೆಸಿಸಿಗೆ ಅರ್ಹ ರಾಗಿದ್ದಾರೆ. ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ- ಪ್ರತಿ ಎಕರೆಗೆ ೨ ಲಕ್ಷಗಳವರೆಗೆ ಸಾಲದ ಮಿತಿ ನಿಗದಿಪಡಿಸಲಾಗಿದೆ. ಘಟಕದ ಪ್ರಗತಿಯನ್ನು ಪರಿಶೀಲಿಸಲು ಶಾಖೆಯ ಅಧಿಕಾರಿಗಳು ಘಟಕ/ ಯೋಜನೆಯ ಸ್ಥಳಕ್ಕೆ ಕ್ಷೇತ್ರ ಭೇಟಿಗಳ ಮೂಲಕ ಮೇಲ್ವಿಚಾರಣೆ ನಡೆಸಲಾಗುತ್ತದೆ. ಬ್ಯಾಂಕುಗಳು ನಿಯತಕಾಲಿಕವಾಗಿ ಸೌಲಭ್ಯವನ್ನು ಪರಿಶೀಲಿಸಿ ಸಾಲಗಾರನ ಕಾರ್ಯಕ್ಷಮತೆಯ ಆಧಾರದ ಮೇಲೆ ಸೌಲಭ್ಯವನ್ನು ಮುಂದುವರೆಸ ಲಾಗುತ್ತದೆ/ ಹಿಂಪಡೆಯಲಾಗುತ್ತದೆ/ ಮಿತಿಯನ್ನು ಹೆಚ್ಚಳ ಮಾಡಲಾಗುತ್ತದೆ. ಬ್ಯಾಂಕುಗಳ ಷರತ್ತು ಮತ್ತು ನಿಬಂಧನೆ ಗಳಿಗೆ ಒಳಪಟ್ಟಿದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಸಂಬAಧ ಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಕೆ.ಟಿ. ದರ್ಶನ ತಿಳಿಸಿದ್ದಾರೆ.