ಮಡಿಕೇರಿ, ಡಿ. ೨೮: ಗ್ರಾಹಕರು ತಾವು ಪಡೆಯುವ ಸೇವೆಯಿಂದ ಅನ್ಯಾಯವಾದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದು ಮತ್ತು ತಮ್ಮ ಕರ್ತವ್ಯಗಳನ್ನು ಚಾಚು ತಪ್ಪದೇ ಪಾಲಿಸುವುದರಿಂದ ಗ್ರಾಹಕರ ಮೇಲಿನ ದೌರ್ಜನ್ಯ ತಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ‘ರಾಷ್ಟಿçÃಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಹಕರೇ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟಿçÃಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗ್ರಾಹಕರಿಗೆ ಸೇವೆ ಒದಗಿಸುವ ಮೂಲದಿಂದ ಯಾವ ಯಾವ ರೀತಿ ಅನ್ಯಾಯಗಳು ನಡೆಯುತ್ತವೆ ಎಂಬುದರ ಬಗ್ಗೆ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಮಾಹಿತಿ ಪಡೆಯಬಹುದಾಗಿದೆ ಎಂದರು. ೫ ಕೋಟಿ ರೂ.ವರೆಗೂ ಮತ್ತು ರಾಷ್ಟಿçÃಯ ಆಯೋಗದ ಮುಂದೆ ೧೦ ಕೋಟಿ ರೂ ವರೆಗೆ ಮೇಲ್ಪಟ್ಟು ಪ್ರಕರಣ ದಾಖಲಿಸುವ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಯಾವುದೇ ಗ್ರಾಹಕನು ಆಯೋಗದಡಿಯಲ್ಲಿ ಪ್ರಕರಣ ದಾಖಲಿಸಿದ ೩ ತಿಂಗಳ ಒಳಗೆ ಪ್ರಕರಣ ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಲೋಕ ಅದಾಲತ್ ಮೂಲಕ ಸೂಕ್ತ ಪರಿಹಾರವನ್ನು ಗ್ರಾಹಕನಿಗೆ ಒದಗಿಸಲಾಗುವುದು ಎಂದು ಗ್ರಾಹಕರ ಹಕ್ಕುಗಳು ಮತ್ತು ಆಯೊಗದ ಬಗ್ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಪ್ರಕಾಶ್ ಕಾಂಡೇರಿ ಅವರು ಬೆಳಕು ಚೆಲ್ಲಿದರು.
ವಕೀಲ ಎಂ.ಎ. ನಿರಂಜನ್ ಅವರು ಮಾತನಾಡಿ, ಗ್ರಾಹಕನಾದವನು ತನಗರಿವಿಲ್ಲದೇ ಗ್ರಾಹಕನಾಗಿದ್ದಾನೆ. ಯಾವುದೇ ರೀತಿಯ ಸೇವೆಯನ್ನಾದರು ಗ್ರಾಹಕನಾದವನು ಪಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಬಹಳ ಎಚ್ಚರ ವಹಿಸಬೇಕು. ಈ ಬಗ್ಗೆ ವಿದ್ಯಾರ್ಥಿಗಳು, ಯುವಕರು ಜಾಗೃತಿ, ಅರಿವು ಮೂಡಿಸುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ನಿರ್ಮಲ ಕುಮಾರ್, ರೇಣುಕಾಂಭ, ಪ್ರಾಂಶುಪಾಲ ಎಂ.ಎನ್.ರವಿ ಶಂಕರ್, ತಹಶೀಲ್ದಾರ್ ಮಹೇಶ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಕುಶಾಲನಗರ ಅಧ್ಯಕ್ಷರಾದ ಎ.ಎ. ಚಂಗಪ್ಪ ಮಾಪನ ಶಾಸ್ತç ಇಲಾಖೆಯ ನಿಂಗರಾಜು ಇತರರು ಇದ್ದರು.
ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮತ್ತು ವಕೀಲರಾದ ನಿರಂಜನ ಅವರು ಸಂವಾದ ನಡೆಸಿದರು. ಆಹಾರ ಪದಾರ್ಥಗಳ ಕಲಬೆರಕೆ, ಪ್ರಮಾಣ, ಗುಣಮಟ್ಟ ಸೇರಿದಂತೆ ಮೋಸ ಹೋಗದೇ ಇರುವುದಕ್ಕೆ ಮಾಡ ಬೇಕಾದ ಕರ್ತವ್ಯದ ಬಗ್ಗೆ ಕೇಳಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಅಂತಹ ಅಂಗಡಿ ಮುಂಗಟ್ಟು ಮತ್ತು ವಸ್ತುಗಳ ಸಂಪೂರ್ಣ ಬಳಕೆ ನಿಷೇಧಿಸಿ ಎಂದು ಸಲಹೆ ನೀಡಿದರು.
ಆಹಾರ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಆಹಾರ ಇಲಾಖೆಯ ನಿರೀಕ್ಷಕರಾದ ವೀಣಾ ಪ್ರಾರ್ಥಿಸಿದರು, ಬೀರೇಶ್ ನಿರೂಪಿಸಿ, ವಂದಿಸಿದರು.