ಸುಂಟಿಕೊಪ್ಪ, ಡಿ. ೨೮: ಭಕ್ತಾದಿಗಳ ನಂಬಿಕೆಯ ಶ್ರದ್ಧಾ ಕೇಂದ್ರವಾದ ಕೆದಕಲ್ ೭ನೇ ಮೈಲಿನ ಶ್ರೀ ಕೊರಗಜ್ಜ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಯನ್ನು ಪೂಜಾ ಕೈಂಕರ್ಯಗಳೊAದಿಗೆ ನೆರವೇರಿಸ ಲಾಯಿತು. ಕೊಡಗರಹಳ್ಳಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಅರ್ಚಕರಾದ ನಾರಾಯಣ ಪೂಜಾರಿ ಅವರು ಶ್ರೀ ಕೊರಗಜ್ಜ ಸ್ವಾಮಿಯ ವಿಗ್ರಹದ ಪ್ರತಿಷ್ಠಾಪನೆಯನ್ನು ವಿಧಿ ವಿಧಾನಗಳ ಮೂಲಕ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿಸಿದರು.

ಕೊರಗಜ್ಜ ಸ್ವಾಮಿಯ ಮುಖ್ಯ ಅರ್ಚಕ ಉಮೇಶ ಹಾಗೂ ಪರಿವಾರದವರು, ಊರಿನ ಪ್ರಮುಖರು ವಿಗ್ರಹ ಪ್ರತಿಷ್ಠಾನದಲ್ಲಿ ಪಾಲ್ಗೊಂಡಿದ್ದರು.