ಪೊನ್ನಂಪೇಟೆ, ಡಿ. ೨೮: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಹಾಕಿ ಪಂದ್ಯಾವಳಿಯ ೨ನೇ ದಿನ ೬ ತಂಡಗಳು ಮುನ್ನಡೆ ಪಡೆದುಕೊಂಡವು.

ಅವಿನಾಶ್ ಲಿಂಗA ಯೂನಿವರ್ಸಿಟಿ ಮದರ್ ತೆರೇಸಾ ಯೂನಿವರ್ಸಿಟಿ ವಿರುದ್ಧ ೫-೦ ಗೋಲುಗಳ ಸುಲಭ ಜಯ ಸಾಧಿಸಿತು. ತಿರುವಳ್ಳವರ್ ಯೂನಿವರ್ಸಿಟಿ ರಾಣಿ ಚೆನ್ನಮ್ಮ ಯೂನಿವರ್ಸಿಟಿ ಯನ್ನು ೨-೦ ಗೋಲುಗಳಿಂದ ಸೋಲಿಸಿತು. ಕೊನೆಯವರೆಗೂ ರೋಚಕತೆ ಮೂಡಿಸಿದ್ದ ಪಂದ್ಯದಲ್ಲಿ ಪೆರಿಯಾರ್ ಯೂನಿವರ್ಸಿಟಿ ಅಣ್ಣಾಮಲೈ ಯೂನಿವರ್ಸಿಟಿ ವಿರುದ್ಧ ೧-೦ ಗೋಲಿನಿಂದ ವಿಜಯ ಸಾಧಿಸಿತು. ಭಾರತೀಯಾರ್ ಯೂನಿವರ್ಸಿಟಿ, ಮಹಾತ್ಮ ಗಾಂಧಿ ಯೂನಿವರ್ಸಿಟಿ ವಿರುದ್ಧ ೪-೧ ಗೋಲುಗಳಿಂದ ಗೆಲುವಿನ ನಗೆ ಬೀರಿತು. ಮತ್ತೊಂದು ರೋಚಕ ಪಂದ್ಯದಲ್ಲಿ ಮಧುರೈ ಕಾಮರಾಜ್ ಯೂನಿವರ್ಸಿಟಿ ವಿರುದ್ಧ ಭಾರತಿ ದಾಸನ್ ಯೂನಿವರ್ಸಿಟಿ ೩-೨ ಗೋಲುಗಳಿಂದ ಜಯ ಸಾಧಿಸಿತು. ಆಂಧ್ರ ಯೂನಿವರ್ಸಿಟಿಯನ್ನು ಟಿಎನ್‌ಪಿಇಎಸ್ ಯೂನಿವರ್ಸಿಟಿ ೧-೦ ಗೋಲಿನಿಂದ ಪರಾಜಯ ಗೊಳಿಸಿತು.