ಗುಡ್ಡೆಹೊಸೂರು, ಡಿ. ೨೭: ಗುಡ್ಡೆಹೊಸೂರು ಸಮೀಪದ ರಸಲ್‌ಪುರ, ಬಾಳುಗೋಡು, ಬೆಟ್ಟಗೇರಿ ವ್ಯಾಪ್ತಿಯ ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿಯ ಸಭೆ ಗುಡ್ಡೆಹೊಸೂರಿನ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಕಾಫಿ ಮಂಡಳಿಯ ಉಪನಿರ್ದೆಶಕ ಶಿವಕುಮಾರ್ ಸ್ವಾಮಿ, ವಿಸ್ತರಣಾಧಿಕಾರಿ ಲಕ್ಷಿö್ಮÃಕಾಂತ್, ಉಪವಿಸ್ತರಣಾಧಿಕಾರಿ ಕೃಷ್ಣಕುಮಾರ್ ಹಾಜರಿದ್ದು, ಕಾಫಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಕಾಫಿ ಬೆಳೆಗೆ ಮುಖ್ಯವಾಗಿ ಬೇಕಾಗಿರುವ ಮಣ್ಣಿನ ಬಗ್ಗೆ ಮಾಹಿತಿ ನೀಡಲಾಯಿತು. ಕಾಫಿ ತಳಿಯ ಬಗ್ಗೆ ವಿವರಿಸಲಾಯಿತು. ಅಲ್ಲದೆ ಮಂಡಳಿಯ ವತಿಯಿಂದ ರೈತರಿಗೆ ದೊರೆಯುತ್ತಿರುವ ಸೌಲಭ್ಯದ ಬಗ್ಗೆ ವಿವರಿಸಲಾಯಿತು.
ಕಾಫಿ ಬೆಳೆಯುತ್ತಿರುವ ರೈತರು ತಮ್ಮ ಆರ್.ಟಿ.ಸಿ.ಯನ್ನು ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವAತೆ ಈ ಸಂದರ್ಭ ಮಂಡಳಿಯ ಅಧಿಕಾರಿಗಳು ತಿಳಿಸಿದರು. ಮುಂದಿನ ತಿಂಗಳು ಗ್ರಾಮಕ್ಕೆ ಆಗಮಿಸಿ ತೋಟಗಳ ಮಣ್ಣು ಪರೀಕ್ಷೆ ನಡೆಸುವುದಾಗಿ ತಿಳಿಸಿದರು. ಕಾಫಿ ಒಣಗಿಸುವ ಕಣ, ಕೆರೆ ಮತ್ತು ಯಂತ್ರೋಪಕರಣ ಖರೀದಿಗೆ ತಮ್ಮ ಇಲಾಖೆ ವತಿಯಿಂದ ಸೌಲಭ್ಯ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಸಭೆಯಲ್ಲಿ ಈ ವಿಭಾಗದ ರೈತರಾದ ಅಚ್ಚಯ್ಯ (ವಿಜು), ಹರಿ, ಜಗದೀಶ್, ಕಾವೇರಪ್ಪ, ಬಿ.ಎಸ್. ಧನಪಾಲ್, ಮನು, ಬೆಳ್ಳಿಯಪ್ಪ (ಡಿಕ್ಕಿ) ನಾಟೋಳನ ಕಂದಮಣಿ ಮುಂತಾದವರು ಹಾಜರಿದ್ದರು.