ವೀರಾಜಪೇಟೆ, ಡಿ. ೨೭: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಎಡಮಕ್ಕಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವವು ಭಕ್ತಿ ಭಾವದಿಂದ ಜರುಗಿತು.

ವಾರ್ಷಿಕೋತ್ಸವದ ಪ್ರಯುಕ್ತ ಗಣಪತಿ ಹೋಮ ನಡೆಸಲಾಯಿತು. ದ್ವಜಾರೋಹಣದ ಬಳಿಕ ಅಯ್ಯಪ್ಪ ಸ್ವಾಮಿಗೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪೂಜೆ ಯನ್ನು ಮಾಡಿ ಮಂಗಳಾರತಿ ಸೇವೆಯನ್ನು ಸಲ್ಲಿಸಲಾಯಿತು.

ಭಕ್ತರಿಗೆ ಅನ್ನದಾನ ಮಾಡಲಾಯಿತು. ಸಂಜೆ ದೇವರಿಗೆ ವಿಶೇಷ ದೀಪ ಆರಾಧನೆ ಹಾಗೂ ತಲಿಪ್ಪೋಲಿ ಸೇವೆಯ ಬಳಿಕ ರಾತ್ರಿ ಮಹಾಪೂಜೆಯನ್ನು ನೆರವೇರಿಸಿ ಭಕ್ತರಿಗೆ ಪ್ರಸಾದ ಹಾಗೂ ಅನ್ನದಾನವನ್ನು ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಬಿ. ಎಸ್. ವೇಣುಗೋಪಾಲ್ ಭಟ್ ಅವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಹಾಜರಿದ್ದರು.