ಕೂಡಿಗೆ, ಡಿ. ೨೭: ತೊರೆನೂರು ನೀರು ಬಳಕೆದಾರರ ಸಹಕಾರ ಸಂಘದ ೯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಸಂಘದ ಕಚೇರಿಯಲ್ಲಿ ನಡೆಯಿತು.

ಐದು ವರ್ಷಗಳ ಆಡಳಿತ ಮಂಡಳಿಯ ಒಟ್ಟು ೧೩ ನಿರ್ದೇಶಕ ಸ್ಥಾನಗಳ ಪೈಕಿ ೪ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿತ್ತು. ೯ ನಿರ್ದೇಶಕರ ಸ್ಥಾನಕ್ಕೆ ೧೫ ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಟಿ.ಎಲ್. ಚಂದ್ರಶೇಖರ, ಟಿ.ಎಸ್. ತೋಟೆಶ್, ವಿ.ಟಿ. ದೇವರಾಜ್, ಟಿ.ಕೆ. ಪಾಂಡುರAಗ, ಟಿ.ಪಿ. ಪುಟ್ಟರಾಜ, ಎ.ವಿ. ಸುರೇಶ್, ಹಿಂದುಳಿದ ಎ ವರ್ಗದಿಂದ ಟಿ.ಎಂ. ಮೋಹನರಾಜ್, ಪರಿಶಿಷ್ಟ ಪಂಗಡದಿAದ ರವಿಚಂದ್ರ ಮತ್ತು ಸಾಮಾನ್ಯ ರೈತ ಕ್ಷೇತ್ರದಿಂದ ಟಿ.ಎಸ್. ಚಂದ್ರಶೇಖರ ಚುನಾಯಿತಗೊಂಡಿದ್ದಾರೆ.

ಚುನಾವಣೆ ಪ್ರಕ್ರಿಯೆಯನ್ನು ಸಹಕಾರ ಇಲಾಖೆಯ ಮಾರಾಟ ಅಧಿಕಾರಿ ಎಸ್.ಎಂ. ರಘು ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಪ್ರೀತು ಪ್ರಸಾದ್, ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಮೇಲ್ವಿಚಾರಕ ಜೀವನ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.