ಮಡಿಕೇರಿ, ಡಿ. ೨೭: ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿAಗ್ ಮಹಿಳಾ ಕಬಡ್ಡಿ ತಂಡ- ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿ (ವಿ.ಟಿ.ಯು.) ಬೆಳಗಾವಿ ವಲಯ ಮಟ್ಟದಲ್ಲಿ ದಾವಣಗೆರೆಯಲ್ಲಿ ನಡೆದ ಪಂದ್ಯಾಟ ದಲ್ಲಿ ಮೈಸೂರಿನ ಜಿಎಸ್‌ಎಸ್‌ಎಸ್ ಐಟಿಇಯನ್ನು ಸೋಲಿಸಿ ಪ್ರಥಮ ಸ್ಥಾನ ಹಾಗೂ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದೆ. ವಿದ್ಯಾರ್ಥಿನಿಯ ರಾದ ವರ್ಷ ಯು.ವಿ., ಶ್ರೇಯ ಕೆ.ಡಿ., ನೇಹ ಕೃಷ್ಣ, ರಮ್ಯ ಕೆ., ವೀಣಾಶ್ರೀ ಪಿ.ಬಿ., ರಜನಿ, ಪೂಜಾ ಜಿ., ಪೂರ್ಣಿಮ ಜಿ.ಕೆ, ಸವಿತಾ ಬಿ., ವಸುಂದರ ದೇವಿ ಎಂ. ಮತ್ತು ಎಸ್. ಜೀನಿತಾ ತಂಡದಲ್ಲಿ ಭಾಗವಹಿಸಿದ್ದರು.