ವೀರಾಜಪೇಟೆ, ಡಿ. ೨೬: ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದಲ್ಲಿರುವ ದ್ವಿಶತಮಾನೋತ್ಸವ ಭವನದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಯೂತ್ ಅಸೋಸಿಯೇಶನ್ ಸದಸ್ಯರ ಸ್ವಾಗತ ನೃತ್ಯದ ಮೂಲಕ ಉದ್ಘಾಟಿಸಲಾಯಿತು.

ಬಳಿಕ ಕಾರ್ಯಕ್ರಮದ ಮುಖ್ಯ ಅತಿಥಿ, ಬೆಂಗಳೂರಿನ ಸಂತ ಪೀಟರ್ ಗುರುಮಠದ ರೆಕ್ಟರ್ ಆಗಿರುವ ರಿಚರ್ಡ್ ಪೀಟರ್ ಮಾತನಾಡಿ, ಕ್ರಿಸ್ತ ಜಯಂತಿ ತನ್ನಷ್ಟಕ್ಕೆ ಹುಟ್ಟಿಕೊಳ್ಳಲಿಲ್ಲ. ಐತಿಹಾಸಿಕವಾಗಿ ಬೆಳೆದು ಬಂದAತಹ ಹಬ್ಬವಾಗಿದೆ. ಎಲ್ಲರೂ ಸೇರಿ ಎಲ್ಲರ ಒಳಿತಿಗಾಗಿ ಆಚರಿಸಲ್ಪಡುವ ಹಬ್ಬ ಇದಾಗಿದ್ದು, ಕ್ರಿಸ್ತ ಜಯಂತಿ ಎಂದರೆ ಆನಂದವನ್ನು ಆಚರಿಸುವ ಹಬ್ಬ ಎಂದರು.

ದೇವಾಲಯದ ಪ್ರಧಾನ ಧರ್ಮಗುರು ಮಧಲೈ ಮುತ್ತು, ಕೋವಿಡ್ ಸಮಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರನ್ನು ಗೌರವಯುತವಾಗಿ ಅಂತ್ಯಸAಸ್ಕಾರ ನೆರವೇರಿಸಿದ ಕೊರೊನಾ ವಾರಿರ‍್ಸ್ಗಳನ್ನು ಸನ್ಮಾನಿಸಿದರು.

ಅಲ್ಲದೇ ಕ್ರಿಸ್ಮಸ್ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ಯಾರೋಲ್ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಹಿರಿಯರನ್ನು ಸನ್ಮಾನಿಸಲಾಯಿತು.

ಸ್ನೇಹಿತರ ಸಂಘ, ಯೂತ್ ಅಸೋಸಿಯೇಶನ್ ಸದಸ್ಯರಿಂದ ನಾಟಕ ಹಾಗೂ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು. ಚಿಣ್ಣರನ್ನು ರಂಜಿಸಲು ಆಗಾಗ್ಗೆ ಸಾಂತಾಕ್ಲಾಸ್ ಸಭೆಯ ಮಧ್ಯದಲ್ಲಿ ಆಗಮಿಸಿ ಮಕ್ಕಳಿಗೆ ಸಿಹಿತಿಂಡಿ ನೀಡಿ, ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸವನ್ನು ಹಂಚಿಕೊAಡರು.

ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರುಗಳು, ಕನ್ಯಾಸ್ತಿçÃಯರು, ಕ್ರೆöÊಸ್ತಬಾಂಧವರು, ಸಾರ್ವಜನಿಕರು ಪಾಲ್ಗೊಂಡಿದ್ದರು.