ಮಡಿಕೇರಿ, ಡಿ. ೨೬: ಮಹಾರಾಷ್ಟçದ ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದನ್ನು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ ಮಹಾರಾಷ್ಟç ಏಕೀಕರಣ ಸಮಿತಿಯ ನಡೆಯನ್ನು ಖಂಡಿಸಿರುವ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೇಶವ ಕಾಮತ್ ಅವರು, ಸಮಿತಿಯನ್ನು ನಿಷೇಧಿಸುವಂತೆ ಕೊಡಗು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿ.ಎನ್. ಮನುಶೆಣೈ, ಅಂಬೆಕಲ್ ನವೀನ್, ಶ್ರೀಧರ್ ಹೂವಲ್ಲಿ ಹಾಜರಿದ್ದರು.