ಸುಂಟಿಕೊಪ್ಪ, ಡಿ.೨೬: ಕ್ರಿಸ್‌ಮಸ್ ಹಬ್ಬದ ರಜೆ ವಾರಾಂತ್ಯ ಹಿನ್ನೆಲೆ ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಸಂತೆ ದಿನವಾದ ಭಾನುವಾರ ಪಟ್ಟಣದಲ್ಲಿ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಸೃಷ್ಟಿಯಾಯಿತು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪೊಲೀಸರ ಕೊರತೆ ಹಾಗೂ ಹೋಂಗಾರ್ಡ್ಗಳು ಸೇವೆ ಇಲ್ಲದೆ ಇರುವುದರಿಂದ ಪಟ್ಟಣದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದ್ದು ಕಂಡು ಬಂತು. ಮತ್ತೊಂದೆಡೆ ಮೈಸೂರಿನಿಂದ ಮಡಿಕೇರಿ ಕಡೆಗೆ ಮಡಿಕೇರಿಯಿಂದ ಕುಶಾಲನಗರ ಕಡೆಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ರಾಷ್ಟಿçÃಯ ಹೆದ್ದಾರಿಯಲ್ಲಿ ಸರತಿ ಸಾಲಿನಲ್ಲಿ ಸಾಗುತಿತ್ತು. ಟ್ರಾಫಿಕ್ ಜಾಮ್‌ನಿಂದ ಸಂತೆಗೆ ಬಂದ ಬಡಕೂಲಿ ಕಾರ್ಮಿಕರು ರಸ್ತೆ ದಾಟಲು ಪರದಾಡುತ್ತಿದ್ದರು.