ಮಡಿಕೇರಿ, ಡಿ. ೨೬: ಕೊಡಗು ಸಂಪಾಜೆ ಗ್ರಾಮದ ಗೇಟಿನ ಬಳಿ ತಾ. ೨೫ ರ ಬೆಳಿಗ್ಗೆ ಗಂಟೆ ೧೧ಕ್ಕೆ ಸಂಪಾಜೆ ಗೇಟಿನ ಬಳಿ ದಿ. ಬಿಪಿನ್ ರಾವತ್ ಅವರ ಪ್ರತಿಮೆ ಹೊತ್ತ ಯುದ್ಧ ವಾಹನ ಶ್ರದ್ದಾಂಜಲಿ ರಥಯಾತ್ರೆ ಕಾರ್ಯಕ್ರಮ ನಡೆಯಿತು.
ಸಂಪಾಜೆ ಗ್ರಾಮದ ಗ್ರಾಮಸ್ಥರು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನು ಅರ್ಪಿಸಿರುವ ವೀರ ಯೋಧರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ದೇಶ-ಸೇನೆ-ಮತ್ತು ಯೋಧರ ಬಗ್ಗೆ ಸಂಪಾಜೆಯ ಮಾಜಿ ಸೈನಿಕ ಓ.ಆರ್. ಮಾಯಿಲಪ್ಪ ಅವರು ಮಾತಾಡಿದರು. ಈ ಸಂದರ್ಭ ಸಂಪಾಜೆ ಗ್ರಾಮದ ಹಿಂದೂ ಭಾಂದವರು, ಯೋಧಾಭಿಮಾನಿ ಬಳಗದವರು, ಮಾಜಿ ಸೈನಿಕರು, ಸೇವೆ ಸಲ್ಲಿಸುತ್ತಿರುವ ಸೈನಿಕರು, ಮಹಿಳಾ ಒಕ್ಕೂಟಗಳ ಸದಸ್ಯರು, ಊರಿನ ಹಿರಿಯರು, ಗ್ರಾಮಸ್ಥರು ಭಾಗವಹಿಸಿದ್ದರು.