ಮಡಿಕೇರಿ, ಡಿ. ೨೬: ಜಿಲ್ಲೆಯ ಮರಾಠ/ಮರಾಟಿ ಸಮಾಜ ಬಾಂಧವರಿಗಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಮರಾಠಿ ರಾಯಲ್ಸ್ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಟಾಸ್ ಸೋತ ಶಿವಾಜಿ ಬ್ರದರ್ಸ್ ಚೆಂಬು ತಂಡ ನಿಗದಿತ ೬ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೫೧ ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಮರಾಠಿ ರಾಯಲ್ಸ್ ಕೊಡಗು ತಂಡ ೨ ವಿಕೆಟ್ ಕಳೆದುಕೊಂಡು ಗುರಿ ತಲುಪಿ ಈ ವರ್ಷದ ಕ್ರಿಕೆಟ್ ಪಂದ್ಯಾಟದ ಚಾಂಪಿಯನ್ ತಂಡವಾಗಿ ಮರಾಠಿ ರಾಯಲ್ಸ್ ಹೊರಹೊಮ್ಮಿದರೆ, ಶಿವಾಜಿ ಬ್ರದರ್ಸ್ ಚೆಂಬು ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.
ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಟಾಸ್ ಸೋತ ಮರಾಠಿ ರಾಯಲ್ಸ್ ಕೊಡಗು ತಂಡ ನಿಗದಿತ ೫ ಓವರ್‌ನಲ್ಲಿ ೭೮ ರನ್ ದಾಖಲಿಸಿತು. ಗುರಿ ಬೆನ್ನಟ್ಟಿದ ಅಮ್ಚಿ ಸ್ಟಾರ್ ಕಾನೂರು ತಂಡ ೨೬ ರನ್ ಸೋಲುಂಡಿತ್ತು. ಎರಡನೇ ಸೆಮಿಫೈನಲ್ಸ್ನಲ್ಲಿ ಟಾಸ್ ಗೆದ್ದ ಅಂಬಾಭವಾನಿ ಗುಡ್ಡೆ ಹೊಸೂರು ತಂಡ ೪೧ ರನ್ ದಾಖಲಿಸಿತು. ಗುರಿಬೆನ್ನಟ್ಟಿದ ಶಿವಾಜಿ ಬ್ರದರ್ಸ್ ತಂಡ ವಿಕೆಟ್
(ಮೊದಲ ಪುಟದಿಂದ) ನಷ್ಟವಿಲ್ಲದೇ ಗುರಿ ತಲುಪಿತು.
ವಾಲಿಬಾಲ್ ಪಂದ್ಯಾಟದಲ್ಲಿ ಗೂಗ್ಲಿ ಬಿ ತಂಡ ಗೂಗ್ಲಿ ಎ ತಂಡವನ್ನು ೧೪-೧೨ ಪಾಯಿಂಟ್ ಗಳ ಅಂತರದಲ್ಲಿ ಮಣಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತ್ತು. ಗೂಗ್ಲಿ ಎ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.
ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಫಾರೆಸ್ಟ್ ಸೈರ‍್ಸ್ ತಂಡವನ್ನು ಶ್ರೀದೇವಿ ತಂಡ ಮಣಿಸಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಶ್ರೀದೇವಿ ತಂಡ ಫಾರೆಸ್ಟ್ ಸೈಡರ್ಸ್ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ಪಡೆಯಿತು. ಪುರುಷರ ಹಗ್ಗಜಗ್ಗಾಟದಲ್ಲಿ ಅಂಚ್ಚಿ ಗೈಯ್ಸ್ ತಂಡ ಪ್ರಥಮ ಸ್ಥಾನ ಪಡೆದರೆ, ಹುಲಿತಾಳ ತಂಡ ದ್ಚಿತೀಯ ಬಹುಮಾನ ಪಡೆದುಕೊಂಡಿತ್ತು.
ಉತ್ತಮ ಬ್ಯಾಟ್ಸ್ಮೆನ್ ಪ್ರಶಸ್ತಿಯನ್ನು ಮರಾಠಿ ರಾಯಲ್ಸ್ ಕೊಡಗು ತಂಡದ ಗಿರಿ, ಬೆಸ್ಟ್ ಬೌಲರ್ ಶಿವಾಜಿ ಬ್ರದರ್ಸ್ ತಂಡದ ಸುಧಾಕರ್, ಪಂದ್ಯ ಶ್ರೇಷ್ಠ ಮರಾಠಿ ರಾಯಲ್ಸ್ ಕೊಡಗು ತಂಡದ ಭರತ್, ಸರಣಿ ಶ್ರೇಷ್ಠ ಸಂತೋಷ್ ಪಡೆದುಕೊಂಡರು. ವಾಲಿಬಾಲ್ ಬೆಸ್ಟ್ ಪ್ಲೆಯರ್ ಪ್ರಶಸ್ತಿ ಗೂಗ್ಲಿ ಎ ತಂಡದ ಸಂದೇಶ್, ಥ್ರೋಬಾಲ್ ಬೆಸ್ಟ್ ಪ್ಲೆಯರ್ ಪ್ರಶಸ್ತಿ ಶ್ರೀದೇವಿ ತಂಡದ ಪ್ರೇಮ ಪಡೆದುಕೊಂಡರು.
ಜಿಲ್ಲಾ ಮರಾಠ/ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎA.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರಿಕೆಟ್ ಪಂದ್ಯಾಟದ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೮೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೪೦೦೦ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಉಳಿದಂತೆ ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು.