ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತ ಸೇನೆ

ಶ್ರೀನಗರ, ಡಿ. ೨೬: ಕಳೆದ ೪೮ ಗಂಟೆಗಳಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅನಂತನಾಗ್ ಗ್ರಾಮದ ಕಲನ್ ಸಿರ್ಗುಫ್ವಾರಾ ಪ್ರದೇಶದಲ್ಲಿ ಭಯೋತ್ಪಾದಕನ ಅಡಗಿರುವ ಬಗ್ಗೆ ನಿಖರ ಮಾಹಿತಿ ಆಧಾರದ ಮೇಲೆ ಜಮ್ಮು ಪೊಲೀಸ್ ಮತ್ತು ಸೇನೆ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಭಯೋತ್ಪಾದಕನ ಉಪಸ್ಥಿತಿಯು ಪತ್ತೆಯಾದ ಕಾರಣ, ಅವರಿಗೆ ಶರಣಾಗಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಇದನ್ನು ಒಪ್ಪದ ಉಗ್ರರು ಸೇನೆ ಮೇಲೆ ಮನಬಂದAತೆ ಗುಂಡು ಹಾರಿಸಿದರು. ಇದಕ್ಕೆ ಪ್ರತೀಕಾರವಾಗಿ ಸೇನೆ ಸಹ ಗುಂಡಿನ ದಾಳಿ ನಡೆಸಿದ್ದು ಆರು ಮಂದಿ ಹತರಾಗಿದ್ದಾರೆ. ಕಾಶ್ಮೀರ ಪೊಲೀಸ್ ಇನ್ಸ್ಪೆಕ್ಟರ್-ಜನರಲ್ ಮಾಹಿತಿ ನೀಡಿರುವ ಪ್ರಕಾರ, ಮೃತ ಉಗ್ರನನ್ನು ಕಡಿಪೋರಾ ಪ್ರದೇಶದ ನಿವಾಸಿ ಫಹೀಂ ಭಟ್ ಎಂದು ಗುರುತಿಸಲಾಗಿದ್ದು, ಈತ ಬಿಜ್‌ಬೆಹರಾ ಪೊಲೀಸ್ ಠಾಣೆಯ ಎಎಸ್‌ಐ ಮೊಹಮ್ಮದ್ ಅಶ್ರಫ್ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ. ಆತನಿಂದ ಶಸ್ತಾçಸ್ತçಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ:ಮೋದಿ

ನವದೆಹಲಿ, ಡಿ. ೨೬: ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ನಮ್ಮ ಮನೆ ಬಾಗಿಲು ತಟ್ಟಿದ್ದು, ಈ ಜಾಗತಿಕ ಸಾಂಕ್ರಾಮಿಕ ರೋಗವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನ ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದ ೮೪ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕೋವಿಡ್-೧೯ ಸಾಂಕ್ರಾಮಿಕದ ಮಧ್ಯೆ ಕುಟುಂಬವಾಗಿ ಒಟ್ಟಿಗೆ ನಿಂತಿರುವ ಭಾರತವನ್ನು ಶ್ಲಾಘಿಸಿದ್ದಾರೆ. ಮುಂದಿನ ಮನ್ ಕೀ ಬಾತ್ ೨೦೨೨ರಲ್ಲಿ ನಡೆಯಲಿದೆ. ನಾವು ಹೊಸ ಕೆಲಸಗಳನ್ನು ಮಾಡೋಣ ಮತ್ತು ನಮ್ಮ ರಾಷ್ಟçದ ಪ್ರಗತಿ ಮತ್ತು ಭಾರತೀಯರ ಸಬಲೀಕರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ ಎಂದು ಹೇಳಿದ್ದಾರೆ. ಬಳಿಕ ಓಮಿಕ್ರಾನ್ ಕುರಿತು ಮಾತನಾಡಿದ ಅವರು, ಹೊಸ ಕೋವಿಡ್-೧೯ ರೂಪಾಂತರವಾಗಿ ಓಮಿಕ್ರಾನ್ ಭಾರತವನ್ನು ಪ್ರವೇಶಿಸುತ್ತಿದ್ದಂತೆ, ನಾವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಎಲ್ಲಾ ಸಮಯದಲ್ಲೂ ಕೋವಿಡ್-೧೯ ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಿರಬೇಕು. ಹೊಸ ವರ್ಷಕ್ಕೆ ನಾವು ಸಿದ್ಧರಾಗಿರುವಾಗ ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿಜ್ಞೆ ಮಾಡಬೇಕು. ಕೋವಿಡ್-೧೯ ಒಮಿಕ್ರಾನ್‌ನ ಹೊಸ ರೂಪಾಂತರವು ನಮ್ಮ ಬಾಗಿಲುಗಳನ್ನು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ. ದೇಶದ ವಿಜ್ಞಾನಿಗಳು ಹೊಸ ಒಮಿಕ್ರಾನ್ ರೂಪಾಂತರವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಪ್ರತಿದಿನ ಅವರು ಹೊಸ ಡೇಟಾವನ್ನು ಪಡೆಯುತ್ತಿದ್ದಾರೆ, ಅವರ ಸಲಹೆಗಳಿಂದ ಕೆಲಸ ಮಾಡಲಾಗುತ್ತಿದೆ ಎಂದರು.

ಮಕ್ಕಳಿಗೆ ಲಸಿಕೆ - ರಾಜ್ಯ ಸರಕಾರದಿಂದ ಸಿದ್ಧತೆ

ಬೆಂಗಳೂರು, ಡಿ. ೨೬: ಕೋವಿಡ್-೧೯ ರೂಪಾಂತರಿ ಓಮಿಕ್ರಾನ್ ಸೋಂಕು ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಕ್ಕಳನ್ನು ಸಾಂಕ್ರಾಮಿಕದಿAದ ರಕ್ಷಿಸಲು ರಾಜ್ಯ ಸರ್ಕಾರ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವಂತೆ ರಾಜ್ಯದಲ್ಲಿಯೂ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಜನವರಿ ೩ ರಿಂದ ಲಸಿಕೆ ನೀಡುವುದನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ರಾಜ್ಯದಲ್ಲಿ ಸುಮಾರು ೪೫ ಲಕ್ಷ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ ನಡೆದಿದೆ. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, ೬೦ ವರ್ಷ ಮೇಲ್ಪಟ್ಟ ಇತರೆ ಅನಾರೋಗ್ಯ ಸಮಸ್ಯೆ ಹೊಂದಿದವರಿಗೆ ಬೂಸ್ಟರ್ ಡೋಸ್ ನೀಡುವುದಕ್ಕೂ ತಯಾರಿ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯಕ್ಕೆ ತಜ್ಞರ ತಂಡ ಆಗಮನ

ಬೆಂಗಳೂರು, ಡಿ. ೨೬: ಕೋವಿಡ್ ಪ್ರಕರಣ ಅಥವಾ ಓಮಿಕ್ರಾನ್ ರೂಪಾಂತರಿ ತಳಿಯ ಹಾವಳಿ ಹೆಚ್ಚಿರುವ ಮತ್ತು ಲಸಿಕಾಕರಣದ ವೇಗ ಬಹಳ ಕಡಿಮೆಯಿರುವ ೧೦ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ರವಾನಿಸಿದ್ದು, ಸಕ್ರಿಯ ಕೋವಿಡ್ ಪ್ರಕರಣ ಮತ್ತು ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಕರ್ನಾಟಕ ರಾಜ್ಯಕ್ಕೂ ತಜ್ಞರ ತಂಡ ಆಗಮಿಸಿದೆ. ಕೇರಳ, ಮಹಾರಾಷ್ಟç, ತಮಿಳುನಾಡು, ಪಶ್ಚಿಮ ಬಂಗಾಳ, ಮಿಜೋರಂ, ಕರ್ನಾಟಕ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್ ಮತ್ತು ಪಂಜಾಬ್ ರಾಜ್ಯಗಳು ಸೇರಿದಂತೆ ೭ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅಥವಾ ಓಮಿಕ್ರಾನ್ ಪೀಡಿತರ ಸಂಖ್ಯೆ ರಾಷ್ಟಿçÃಯ ಸರಾಸರಿಗಿಂತ ಹೆಚ್ಚಾಗಿದ್ದು, ಮಿಜೋರಂ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಿದ್ದರೂ ಲಸಿಕಾಕರಣದ ವೇಗ ಬಹಳ ಮಂದಗತಿಯಲ್ಲಿದೆ. ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವಿವಿಧ ಸುದ್ದಿವಾಹಿನಿಗಳು, ರಾಜ್ಯ ಸರ್ಕಾರಗಳು ಹಾಗೂ ಆಂತರಿಕ ವರದಿಗಳು ಎಚ್ಚರಿಕೆ ನೀಡಿವೆ. ಕೆಲ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ವೇಗಾಗಿ ಏರುತ್ತಿವೆ. ಇನ್ನು ಕೆಲ ರಾಜ್ಯಗಳಲ್ಲಿ ಲಸಿಕಾಕರಣದ ವೇಗ ಬಹಳ ಕಡಿಮೆಯಿದೆ. ಹೀಗಾಗಿ ರಾಜ್ಯಗಳಿಗೆ ನೆರವು ನೀಡಲು ತಂಡಗಳನ್ನು ಕಳುಹಿಸಲಾಗುತ್ತಿದೆ. ಗುರುತಿಸಲಾದ ರಾಜ್ಯಗಳಲ್ಲಿ ಕೇಂದ್ರ ತಂಡಗಳು ಐದು ದಿನಗಳ ಕಾಲ ವಾಸ್ತವ್ಯ ಹೂಡಲಿದೆ. ಕರ್ನಾಟಕ ದಲ್ಲಿ ಕಳೆದ ೧೪ ದಿನಗಳಲ್ಲಿ ಕ್ಲಸ್ಟರ್‌ಗಳು ಮತ್ತು ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಷ್ಟಿçÃಯ ಆರೋಗ್ಯ ಆಯೋಗದ ನಿರ್ದೇಶಕರೊಂದಿಗೆ ಇತ್ತೀಚೆಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ದಲ್ಲಿ ಕ್ಲಸ್ಟರ್ ಪ್ರಕರಣಗಳು ಹೆಚ್ಚಾಗಿರುವುದರ ಕುರಿತು ಚರ್ಚಿಸಲಾಗಿದೆ.

ಆಡಳಿತ ಸೂಚ್ಯಂಕ-ಕರ್ನಾಟಕ ತೃತೀಯ ಸ್ಥಾನ

ಬೆಂಗಳೂರು, ಡಿ. ೨೬: ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳ ಆಡಳಿತ ವ್ಯವಸ್ಥೆ, ವ್ಯವಸ್ಥೆಯಲ್ಲಿನ ಸುಧಾರಣೆಗಳ ಮೇಲೆ ಬೆಳಕು ಚೆಲ್ಲುವ ಉತ್ತಮ ಆಡಳಿತ ಸೂಚ್ಯಂಕ ೨೦೨೧ ವರದಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಸಮಗ್ರ ಪಟ್ಟಿಯಲ್ಲಿ, ಕಳೆದ ವರ್ಷ ೩ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ ೫.೧೦೯ ಅಂಕಗಳೊAದಿಗೆ ೬ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಗುಜರಾತ್ (೫.೬೬೨), ಮಹಾರಾಷ್ಟç (೫.೪೨೫) ಹಾಗೂ ಗೋವಾ (೫.೩೪೮) ರಾಜ್ಯಗಳು ಮೊದಲ ೩ ಸ್ಥಾನ ಪಡೆದುಕೊಂಡಿವೆ. ೨೦೧೯ರಲ್ಲಿ ಸಮಗ್ರ ಪಟ್ಟಿಯಲ್ಲಿ ೩ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಬಿಡುಗಡೆಯಾದ ವರದಿಯಲ್ಲಿ ಶೇ. ೦.೨ರಷ್ಟು ಏರಿಕೆ ಕಂಡಿದ್ದರೂ, ಒಟ್ಟಾರೆ ೩ ಸ್ಥಾನ ಕುಸಿತ ಕಂಡು ೬ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ಕೃಷಿ ಮತ್ತು ಸಂಬAಧಿತ ವಲಯ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸೇವೆಗಳು ಹಾಗೂ ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ವಲಯದಲ್ಲಿ ಕರ್ನಾಟಕ ಪ್ರಗತಿ ತೋರಿಸಿದೆ.

ಬಾಯ್ಲರ್ ಸ್ಫೋಟ - ಐವರು ಸಾವು

ಮುಜಾಫರ್‌ಪುರ, ಡಿ. ೨೬: ಕುರ್‌ಕುರೆ ಮತ್ತು ನೂಡಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಐವರು ಸಾವನ್ನಪ್ಪಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ದುರ್ಘಟನೆಯಲ್ಲಿ ೧೦ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮುಜಾಫರ್‌ಪುರ ಜಿಲ್ಲೆಯ ಬೇಲಾ ಕೈಗಾರಿಕಾ ಪ್ರದೇಶದಲ್ಲಿರುವ ಮೋದಿ ಕುರ್‌ಕುರೆ ಮತ್ತು ನೂಡಲ್ಸ್ ಕಾರ್ಖಾನೆಯಲ್ಲಿ ದುರಂತ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಬಾಯ್ಲರ್ ಸ್ಫೋಟದ ಸದ್ದು ೫ ಕಿ.ಮೀ. ದೂರದವರೆಗೂ ಕೇಳಿ ಬಂದಿದ್ದು, ಸ್ಫೋಟದ ತೀವ್ರತೆಗೆ ಹತ್ತಿರದ ಹಲವಾರು ಕಾರ್ಖಾನೆಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆAದು ತಿಳಿದುಬಂದಿದೆ.