ಕಣಿವೆ, ಡಿ. ೨೬: ಕೊಡಗು ಜಿಲ್ಲೆಯ ಪ್ರಮುಖ ಹೆಬ್ಬಾಗಿಲು ಆಗಿರುವ ಕುಶಾಲನಗರ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ೨೦೧೧ ರ ಜನಗಣತಿಯ ಪ್ರಕಾರ ಇದೀಗ ೨೭,೩೭೬ ಜನಸಂಖ್ಯೆಯನ್ನು ಹೊಂದಿರುವ ಕುಶಾಲನಗರ ಪಟ್ಟಣವನ್ನು ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿಯಿAದ ಪುರಸಭೆಯಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸಿದೆ.
ಇದೀಗ ಪುರಸಭೆಯ ವ್ಯಾಪ್ತಿಯನ್ನು ಪ್ರತೀ ಚದರ ಕಿ.ಮೀ.ಗೆ ೨೪೬೨ ಜನಸಂಖ್ಯೆಯೊAದಿಗೆ ೧೧.೧೨ ಕಿ.ಮೀ.ಗೆ ನಿಗದಿಪಡಿಸಲಾಗಿದೆ.
ಕೇವಲ ಶೇ. ೧೫ ರಷ್ಟು ಕೃಷಿ ಪ್ರದೇಶದೊಂದಿಗೆ, ಶೇ. ೮೫ ರಷ್ಟು ಕೃಷಿಯೇತರ ಚಟುವಟಿಕೆಗಳನ್ನು ಹೊಂದಿರುವ ಈ ಪಟ್ಟಣದ ೨೭,೩೭೬ ಜನಸಂಖ್ಯೆಯ ಒಟ್ಟು ತಲಾ ಆದಾಯ ೨೯,೭೧,೯೯೧ ರೂ.ಗಳೆಂದು ಅಂದಾಜಿಸಲಾಗಿದೆ.
ಕುಶಾಲನಗರ ಪುರಸಭಾ ವ್ಯಾಪ್ತಿ ಕುಶಾಲನಗರ ಪಟ್ಟಣವನ್ನು ಒಳಗೊಂಡು ಮುಳ್ಳುಸೋಗೆ ಪೂರ್ಣ ಕಂದಾಯ ಗ್ರಾಮದೊಂದಿಗೆ ಗೊಂದಿಬಸವನಹಳ್ಳಿ, ಗುಮ್ಮನಕೊಲ್ಲಿ ಹಾಗೂ ಮಾದಾಪಟ್ಟಣ ಗ್ರಾಮಗಳ ಭಾಗಶಃ ಪ್ರದೇಶವನ್ನು ಒಳಗೊಂಡಿದೆ.
ಅAದರೆ, ಕುಶಾಲನಗರದ ಉತ್ತರ ದಿಕ್ಕಿನ ಗುಮ್ಮನಕೊಲ್ಲಿ ಗ್ರಾಮದ ಈಶಾನ್ಯ ಭಾಗದಿಂದ ಹಾರಂಗಿ ರಸ್ತೆಯಿಂದ ಆರಂಭ ಗೊಂಡು ಸ.ನಂ ೯೭ರ ಜಯರಾಂ ಅವರ ಮನೆಗಾಗಿ ಪೂರ್ವಾಭಿ ಮುಖವಾಗಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ ಸೇರಿಕೊಂಡು ಗುಮ್ಮನಕೊಲ್ಲಿ ಗ್ರಾಮದ ಸ.ನಂ.೫/೧ ಕಡಂಗ ದಾಟಿ ದಕ್ಷಿಣಾಭಿಮುಖವಾಗಿ ಬಿಸಿಎಂ ಹಾಸ್ಟೆಲ್ ಸೇರಿಕೊಂಡು ಸ.ನಂ ೭ರ ಗನಿಪ್ರಸಾದ್ ಹಾಗೂ ಸುಶೀಲಮ್ಮ ಅವರ ತೋಟದ ಮೂಲಕ ಹಾಸನ ಸೋಮವಾರ ಪೇಟೆ ರಸ್ತೆಗೆ ಬಂದು ಸೇರುತ್ತದೆ.
ನಂತರ ಪೂರ್ವಾಭಿಮುಖವಾಗಿ ಗುಮ್ಮನಕೊಲ್ಲಿ ಗ್ರಾಮದ ಸ.ನಂ ೧೬, ೧೭, ೧೮ ಹಾಗೂ ಸ.ನಂ. ೮೬ ರ ಜಿ.ಕೆ. ಕುಮಾರ್ ಅವರ ಖಾಲಿ ಜಾಗವನ್ನು ಸೇರಿಕೊಂಡು ಕಾವೇರಿ ಹೊಳೆಗೆ ಬಂದು ಸೇರುತ್ತದೆ.
ಪೂರ್ವಕ್ಕೆ: ಕಾವೇರಿ ಹೊಳೆಯಿದೆ. ಪಶ್ಚಿಮಕ್ಕೆ : ಕುಶಾಲನಗರದ ಪಶ್ಚಿಮ ದಿಕ್ಕಿನ ಗೊಂದಿಬಸವನಹಳ್ಳಿ ಗ್ರಾಮದ ಪಶ್ಚಿಮಾಭಿಮುಖವಾಗಿ ಚಲಿಸಿ ಗೊಂದಿಬಸವನಹಳ್ಳಿ ಗ್ರಾಮದ ಸ.ನಂ.೧೫/೨ ರ ರಮ್ಲತ್, ಅಪ್ಪಚಾಮಿ ಅವರ ಮನೆಗಾಗಿ ಗೊಂದಿಬಸವನ ಹಳ್ಳಿ ಗ್ರಾಮದ ಸೊಸೈಟಿಗೆ ಹೋಗುವ ರಸ್ತೆ ಯೊಂದಿಗೆ ಚಿಕ್ಲಿಹೊಳೆ ನಾಲೆ ಸೇರಿಕೊಂಡು ಪಶ್ಚಿಮಾಭಿಮುಖವಾಗಿ ಸ.ನಂ ೧ ರ ಪಾರ್ವತಿ, ಸ್ಟೀಫನ್ ಅವರ ಜಾಗವನ್ನು ಸೇರಿಕೊಂಡು ಉತ್ತರಾಭಿಮುಖವಾಗಿ ಇಬ್ರಾಹಿಂ, ಸೌದೆ ರಾಜ, ಮೈನ್ ಕ್ವಾರಿ ಮೂಲಕ ಗೊಂದಿಬಸವನಹಳ್ಳಿ ಅಂಗನವಾಡಿ ಸೇರಿದಂತೆ ಸ.ನಂ. ೧ರ ಗೊಂದಿ ಬಸವನಹಳ್ಳಿಯಲ್ಲಿ ಅಂತ್ಯವಾಗುತ್ತದೆ.
ನAತರ ಉತ್ತರಾಭಿಮುಖವಾಗಿ ತೆರಳಿ ಗುಮ್ಮನಕೊಲ್ಲಿ ಸ.ನಂ ೧/೨ ಸೇರಿಕೊಂಡು ಪೂರ್ವಕ್ಕೆ ಚಲಿಸಿ ರಘು ಅವರ ಸಿಲ್ವರ್ ತೋಟ, ಕೋರೆ ರಮೇಶ್, ಕಣ್ಣಯ್ಯ, ಬೋರಯ್ಯ ಅವರ ಜಾಗ, ಗುಮ್ಮನಕೊಲ್ಲಿ ಗ್ರಾಮದ ಸ.ನಂ. ೯೬/೧ ಒಳಗೊಂಡು ಅಗ್ನಿಶಾಮಕ ಠಾಣೆಯ ಹಾರಂಗಿ ರಸ್ತೆ ಸಂಧಿಸುತ್ತದೆ.
ದಕ್ಷಿಣಕ್ಕೆ: ಮಾದಾಪಟ್ಟಣದ ದಕ್ಷಿಣ ದಿಕ್ಕಿನಿಂದ ನೈರುತ್ಯ ಭಾಗದ ಕಾವೇರಿ ಹೊಳೆಯಿಂದ ಉತ್ತರಾಭಿ ಮುಖವಾಗಿ ಸ.ನಂ ೧೦೫/೧, ೧೦೨ ನಂತರ ರಾಷ್ಟಿçÃಯ ಹೆದ್ದಾರಿ ೨೭೫ ದಾಟಿ ಮಾದಾಪಟ್ಟಣ ಗ್ರಾಮದ ಸ.ನಂ. ೯೪ ಹಾಗೂ ೯೩ ಹಾಗೂ ಸರ್ಕಾರಿ ಇಂಜಿನಿಯರಿAಗ್ ಕಾಲೇಜು, ಮಾದಾಪಟ್ಟಣದ ಸ.ನಂ. ೩೯/೨ ಹಾಗೂ
(ಮೊದಲ ಪುಟದಿಂದ) ಸ.ನಂ. ೧೧ ಸೇರಿಕೊಂಡು ಮಾದಾಪಟ್ಟಣದಿಂದ ಗೊಂದಿಬಸವನಹಳ್ಳಿಗೆ ಬಂದು ಸೇರುತ್ತದೆ.
ಆಳ್ವಿಕೆ ನಡೆಸಿರುವ ಮಹನೀಯರು
ಕುಶಾಲನಗರ ೧೯೦೭ ರಿಂದ ೧೯೬೪ ರವರೆಗೆ ೫೫ ವರ್ಷಗಳವರೆಗೆ ಸುದೀರ್ಘ ಕಾಲ ಸೋಮವಾರಪೇಟೆ ಸುಭೇದಾರರ ಆಳ್ವಿಕೆಗೆ ಒಳಪಟ್ಟಿತ್ತು.
ನಂತರ ೧೯೬೪ ರಿಂದ ೧೯೬೫ ರವರೆಗೆ ಕೆ.ಟಿ. ಸುಬ್ಬಯ್ಯ, ೧೯೬೫ - ೬೬ ರ ತನಕ ಡಿ.ಟಿ. ಚಿಕ್ಕಣ್ಣ, ೧೯೬೬ ರಿಂದ ೧೯೭೫ ರವರೆಗೆ ಮಾಜಿ ಮುಖ್ಯ ಮಂತ್ರಿ ದಿ. ಆರ್. ಗುಂಡೂರಾವ್ ಆಳ್ವಿಕೆ ನಡೆಸಿದ್ದರು.
ಬಳಿಕ ೧೯೭೫ ರಿಂದ ೧೯೮೦ ರವರೆಗೆ ಎಸ್.ಆರ್. ವಾಸುದೇವ್ ಅಧಿಕಾರ ನಡೆಸಿದರು. ನಂತರ ೧೯೮೦ ರಿಂದ ೧೯೮೪ ರವರೆಗೆ ಆಡಳಿತಾಧಿಕಾರಿ ನೇಮಕವಾಗಿತ್ತು. ನಂತರ ೧೯೮೪ ರಿಂದ ೧೯೮೬ ರವರೆಗೆ ಜೆ.ಎಸ್. ಅಂಥೋಣಿ, ಈ ಮಧ್ಯೆ ಆರು ತಿಂಗಳ ಅವಧಿಗೆ ವಿ.ಪಿ. ರಾಜಶೇಖರ್, ನಂತರ ೧೯೮೬ ರಿಂದ ೧೯೯೫ ರವರೆಗೆ ಡಿ.ಟಿ. ಚಿಕ್ಕಣ್ಣ ಆಳ್ವಿಕೆ ನಡೆಸಿದ್ದರು.
೧೯೯೫ ರಿಂದ ೨೦೦೧ ರವರೆಗೆ ಹೆಚ್.ಡಿ. ಚಂದ್ರು ಆಳ್ವಿಕೆ ನಡೆಸಿದರು. ನಂತರ ೨೦೦೧ ರಿಂದ ೨೦೦೩ ರ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಯಾಗಿದ್ದ ಕುಶಾಲನಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿ ಬೃಹತ್ ಹೋರಾಟ ರೂಪುಗೊಂಡ ಪರಿಣಾಮ ಘೋಷಣೆಗೊಂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಯನ್ನು ಬಹಿಷ್ಕರಿಸಿದ ಪರಿಣಾಮ ಚುನಾಯಿತ ಪ್ರತಿನಿಧಿಗಳು ನೇಮಕವಾಗದ ಕಾರಣ ಮತ್ತೆ ೨೦೦೮ ರವರೆಗೂ ಆಡಳಿತಾಧಿಕಾರಿ ಆಡಳಿತವಿತ್ತು.
ಬಳಿಕ ಪಟ್ಟಣ ಪಂಚಾಯಿತಿ ಯಾಗಿ ರೂಪುಗೊಂಡ ಕುಶಾಲನಗರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಪಾರ್ವತಿ ಹರಿಹರ ಹಾಗೂ ಮೆಹರುನ್ನೀಸಾ ೨೦೦೮ರಲ್ಲಿ ಕೆಲವೇ ತಿಂಗಳ ಕಾಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿದ್ದರು.
ಬಳಿಕ ೨೦೦೮ ರಿಂದ ೨೦೧೦ ರವರೆಗೆ ಹೆಚ್.ಜೆ. ಕರಿಯಪ್ಪ, ೨೦೧೦ ರಿಂದ ೨೦೧೩ ರವರೆಗೆ ಚರಿತಾ ಪ್ರಕಾಶ್, ೨೦೧೩ ರಿಂದ ೨೦೧೬ ರವರೆಗೆ ಡಿ.ಕೆ. ತಿಮ್ಮಪ್ಪ, ೨೦೧೬ ರಿಂದ ೨೦೧೭ ರವರೆಗೆ ಎಂ.ಎA. ಚರಣ್, ೨೦೧೭ ರಿಂದ ೨೦೧೮ ರವರೆಗೆ ರೇಣುಕಾ ಅಧ್ಯಕ್ಷರಾಗಿದ್ದರು. ನಂತರ ೨೦೧೮ ರಿಂದ ೨೦೨೦ ರವರೆಗೆ ಮತ್ತೆ ಆಡಳಿತಾಧಿಕಾರಿ ನೇಮಕವಿತ್ತು. ಇದೀಗ ೩.೧೧.೨೦೨೦ ರಿಂದ ಜಯವರ್ಧನ ಎಂಬವರು ಪಟ್ಟಣ ಪಂಚಾಯಿತಿಯ ಕೊನೆಯ ಅವಧಿಯ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದಾರೆ.
ಇದೀಗ ಸರ್ಕಾರ ಕುಶಾಲನಗರ ಪಟ್ಟಣವನ್ನು ಪುರಸಭೆಯಾಗಿ ಘೋಷಿಸಿದ್ದು ಶೀಘ್ರದಲ್ಲಿಯೇ ಆಡಳಿತಾತ್ಮಕವಾದ ಆದೇಶ ಹೊರಬೀಳಲಿದೆ. ಇದರಿಂದಾಗಿ ತಾಲೂಕು ಕೇಂದ್ರವಾಗಿರುವ ಕುಶಾಲನಗರಕ್ಕೆ ಸರ್ಕಾರದಿಂದ ಕೋಟಿ ಕೋಟಿ ರೂಪಾಯಿಗಳ ಅನುದಾನಗಳ ಮಹಾಪೂರವೇ ಹರಿದುಬರುವ ನಿರೀಕ್ಷೆ ಇದೆ.
ನಿವಾಸಿಗಳಿಗೆ ಸಂತಸ - ಚುನಾಯಿತರಿಗೆ ಸಂಕಟ
ಇಲ್ಲಿ ಪುರಸಭಾ ವ್ಯಾಪ್ತಿಗೆ ಕುಶಾಲನಗರ ಸೆರಗಿನ ಮುಳ್ಳುಸೋಗೆ ಕಂದಾಯ ಗ್ರಾಮ ಪೂರ್ಣ ಭಾಗ ಸೇರಿರುವುದರಿಂದ ಆ ಭಾಗದ ಬಡಾವಣೆಗಳು ಸಮಗ್ರವಾದ ಅಭಿವೃದ್ಧಿ ಹೊಂದುವುದು ಸನ್ನಿಹಿತವಾಗಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ತಮ್ಮ ವಾರ್ಡುಗಳು ಅಭಿವೃದ್ಧಿಯಾಗುವ ಕಾರಣ ಒಂದು ರೀತಿ ಸಂತಸ ವಾದರೆ, ಇಲ್ಲಿಂದ ಚುನಾಯಿತರಾಗಿ ರುವ ಸದಸ್ಯರಿಗೆ ಸದಸ್ಯತ್ವರದ್ದಾಗುವ ಸಂಕಷ್ಟ ಒಂದೆಡೆ ಎದುರಾಗಲಿದೆ ಎನ್ನಲಾಗುತ್ತಿದೆ. ಅಂದರೆ ಗ್ರಾಮ ಪಂಚಾಯಿತಿಯ ಅಧೀನದಲ್ಲಿನ ಮುಳ್ಳುಸೋಗೆ ಪಂಚಾಯಿತಿಗೆ ಸರ್ಕಾರದ ಅನುದಾನಗಳು ಸಮರ್ಪಕವಾಗಿ ಬಾರದ ಕಾರಣ ಅಲ್ಲಿನ ಬಹುತೇಕ ಬಡಾವಣೆಗಳು ಮೂಲ ಸೌಕರ್ಯ ಗಳಿಂದ ವಂಚಿತ ಗೊಂಡಿದ್ದವು.
ಇದೀಗ ಪುರಸಭಾ ವ್ಯಾಪ್ತಿಗೊಳ ಪಡುವ ಕಾರಣ ಅನುದಾನಗಳ ಮಹಾಪೂರವೇ ಹರಿದು ಬರುವ ಕಾರಣ ನಿವಾಸಿಗಳು ಸಂತಸದಲ್ಲಿದ್ದಾರೆ. - ಕೆ.ಎಸ್. ಮೂರ್ತಿ