ವೀರಾಜಪೇಟೆ, ಡಿ. ೨೬: ಕೊಡಗು ವೃತ್ತ ಕರ್ನಾಟಕ ರಾಜ್ಯದ ರಾಜ್ಯ ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘದ ಮಹಾಸಭೆಯನ್ನು ಮಡಿಕೇರಿಯ ಅರಣ್ಯ ಭವನದಲ್ಲಿ ನಡೆಸಲಾಯಿತು. ಸಭೆಯಲ್ಲಿ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಕುಂದು ಕೊರತೆಗಳನ್ನು ಸಮಗ್ರವಾಗಿ ಚರ್ಚಿಸಲಾಯಿತು.

ಹಾಗೂ ಈ ಸಂದರ್ಭದಲ್ಲಿಯೇ ಪದಾಧಿಕಾರಿಗಳನ್ನು ಸಂಘಕ್ಕೆ ನೇಮಕ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ಟಿ. ಎನ್ ಪ್ರಶಾಂತ್ ಕುಮಾರ್, ಉಪಾಧ್ಯಕ್ಷರಾಗಿ ಚೌಡಪ್ಪ ನಾಯ್ಕ ಜಡ್ಡಿಮನಿ, ಕಾರ್ಯದರ್ಶಿಗಳಾಗಿ ಸಚಿನ್ ಹಾಗೂ ಖಜಾಂಜಿಯಾಗಿ ಶ್ರೀಕಾಂತ್ ರನ್ನು ನೇಮಕ ಮಾಡಲಾಯಿತು.