ಗೋಣಿಕೊಪ್ಪಲು, ಡಿ. ೨೬: ದ. ಕೊಡಗಿನ ವಾಣಿಜ್ಯ ಕೇಂದ್ರ ಗೋಣಿಕೊಪ್ಪಲುವಿನಲ್ಲಿ ನೂತನವಾಗಿ ಆರಂಭಗೊAಡ ಜನಪದ ಪತ್ತಿನ ಸಹಕಾರ ಸಂಘವನ್ನು ಲೋಕಾರ್ಪಣೆಗೊಳಿಸಲಾಯಿತು.

ಅರಮೇರಿ ಕಳಂಚೇರಿ ಮಠದÀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೂತನ ಸಹಕಾರ ಸಂಘವನ್ನು ಉದ್ಘಾಟನೆ ಮಾಡಿದರು.

ನಂತರ ಸಮೀಪದ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಸಂಪತ್ತಿನಿAದ ಸಮಾಧಾನ ಸಾಧ್ಯವಿಲ್ಲ, ಜನರ ಸೇವೆಯಲ್ಲಿ ಸಮಾಧಾನ ಕಂಡುಕೊಳ್ಳಬಹುದು, ಪ್ರತಿ ವ್ಯಕ್ತಿಯು ಸೇವೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಬ್ಯಾಂಕಿನಿAದ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಪಾವತಿಸುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು, ಯಾವುದೇ ಸಂಘ ಬೆಳೆಯಲು ಜನರ ಭಾಗವಹಿಸುವಿಕೆ ಮುಖ್ಯ, ಸರ್ಕಾರದ ನಿಬಂಧನೆಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಂಘದ ಸವಲತ್ತುಗಳು ತಲುಪುವಂತಾಗಲಿ ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ವ್ಯಾಪಾರೋದ್ಯಮ ನಡೆಸಲು ಸಹಕಾರಿ ಸಂಘಗಳು ಅವಶ್ಯಕ. ಇದರಿಂದ ಸಣ್ಣಪುಟ್ಟ ಉದ್ಯಮಗಳು ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಪದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್ ಭಂಡಾರಿ ನೂತನ ಸಂಘ ಸ್ಥಾಪನೆಗೆ ಹಲವು ಸಮಯದಿಂದ ಪ್ರಯತ್ನ ನಡೆಸಿದ್ದೇವೆ. ಇಂದು ಫಲ ನೀಡಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಮುದಾಯದ ಜನರನ್ನು ಸೇರಿಸಿಕೊಂಡು ಸಂಘ ಸ್ಥಾಪಿಸಲಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೂ ಬ್ಯಾಂಕ್‌ನ ಸದಸ್ಯತ್ವ ನೀಡಲಾಗುತ್ತದೆ, ಸುಮಾರು ೫೦೦೦ ಸದಸ್ಯತ್ವ ಹೊಂದುವ ಗುರಿ ಹೊಂದಲಾಗಿದೆ ಎಂದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಬಿ.ಬಿ. ಐತಪ್ಪ ರೈ, ಬಿ.ವೈ. ಆನಂದ ರಘು, ಮುಂತಾದ ಪ್ರಮುಖರು ಮಾತನಾಡಿದರು. ಸಂಘದ ಉಪಾಧ್ಯಕ್ಷ ಕೆ.ಜಿ. ರಾಮಕೃಷ್ಣ ಹಾಗೂ ಅತಿಥಿಗಳು ಸಮುದಾಯದ ಪರವಾಗಿ ಎಂ.ಎಲ್.ಸಿ. ಸುಜಾ ಕುಶಾಲಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಎಂ.ಬಿ. ಹರೀಶ್ ಆಳ್ವ, ಪಿ.ಆರ್. ವಿಜಯ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಪಿ.ಎಂ. ರವಿ ಕಾರ್ಯಕ್ರಮ ನಿರೂಪಿಸಿ, ನವೀನ ಪ್ರಾರ್ಥಿಸಿ, ಆನಂದ್ ರಘ ಸ್ವಾಗತಿಸಿದರು.