ನಾಪೋಕ್ಲು, ಡಿ. ೨೬: ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೌರಿರ ಕಪ್ ಹಾಕಿ ಕ್ರೀಡಾಕೂಟದ ಎರಡನೆಯ ದಿನದ ಪಂದ್ಯಾಟದಲ್ಲಿ ನೆಲ್ಲಮಕ್ಕಡ, ಕಂಗಾAಡ, ಕಡೇಮಡ, ಅಮ್ಮಣಿಚಂಡ, ತೀತಿಮಾಡ, ಮೇಕೇರಿರ, ಮಚ್ಚಂಡ, ಮಾರ್ಚಂಡ, ಇಟ್ಟಿರ, ಪೆಮ್ಮಂಡ, ಚೆರುಮಂದAಡ, ಚೆಪ್ಪುಡಿರ, ಕಂಬೀರAಡ, ಕಾಂಡAಡ, ಕಳ್ಳಿಚಂಡ, ಮಾಚಿಮಂಡ, ಐಚೆಟ್ಟಿರ, ಮುರುವಂಡ, ಮೇರಿಯಂಡ, ಕೂತಂಡ, ಬಾರಿಯಂಡ, ಪುಟ್ಟಿಚಂಡ, ಚೆಕ್ಕೆರ, ಮಂಡೇಟಿರ, ಮಾತಂಡ, ಕನ್ನಂಡ, ಕುಪ್ಪಂಡ, ನೆರವಂಡ, ಕುಲ್ಲೇಟಿರ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ನೆಲ್ಲಮಕ್ಕಡ ಬಟ್ಟಿರವನ್ನು ೫-೦ ಗೋಲುಗಳ ಅಂತರದಿAದ ಮಣಿಸಿತು. ಕಂಗಾAಡ ಮತ್ತು ಮೂಕಚಂಡ ನಡುವೆ ನಡೆದ ಪಂದ್ಯದಲ್ಲಿ ಕಂಗಾAಡ ತಂಡವು ಶೂಟೌಟ್‌ನಲ್ಲಿ ಜಯಗಳಿಸಿತು. ಕಡೇಮಡ ತಂಡವು ಮಂಡಿರ ಕುಟುಂಬವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಅಮ್ಮಣಿಚಂಡ ತಂಡವು ಅರೆಯಡ ತಂಡವನ್ನು ೭-೬ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ತೀತಿಮಾಡ ತಂಡವು ಮಂಡೇಪAಡ ತಂಡವನ್ನು ೪-೩ ಗೋಲುಗಳ ಅಂತರದಿAದ ಮಣಿಸಿದರೆ, ಮೇಕೇರಿರ ತಿರುತೆರÀವನ್ನು ೪-೩ ಗೋಲುಗಳ ಅಂತರದಿAದ ಸೋಲಿಸಿತು. ಮಚ್ಚಂಡ ತಂಡವು ನಾಳಿಯಂಡ ತಂಡವನ್ನು ಶೂಟೌಟ್‌ನಲ್ಲಿ ಸೋಲಿಸಿತು. ಮಾರ್ಚಂಡ ತಂಡವು ಬಾಳೆಯಡ ತಂಡವನ್ನು ೨-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕೋಡಿಮಣಿಯಂಡ ಮತ್ತು ಇಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಟ್ಟಿರ ತಂಡವು ಕೋಡಿಮಣಿಯಂಡ ತಂಡದ ವಿರುದ್ಧ ವಿಜಯ ಸಾಧಿಸಿತು. ಪೆಮ್ಮಂಡ ಮುಕ್ಕಾಟಿರವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಪಾಲಂದಿರ ಮತ್ತು ಚೆರುಮಂದAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರುಮಂದAಡ ತಂಡವು ಶೂಟೌಟ್‌ನಲ್ಲಿ ವಿಜಯಗಳಿಸಿತು. ಚೆಪ್ಪುಡಿರ ವಿರುದ್ಧ ಬಯವಂಡ ೪-೦ ಗೋಲುಗಳ ಅಂತರದಿAದ ಸೋಲಿಸಿತು. ಕಂಬೀರAಡ ತಂಡವು ಆದೇಂಗಡ ತಂಡವನ್ನು ೪-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕಾಂಡAಡ ತಂಡ ಮುಂಡ್ಯೋಳAಡ ತಂಡವನ್ನು ೫-೩ ಗೋಲುಗಳ ಅಂತರದಿAದ ಮಣಿಸಿತು. ಕಳ್ಳಿಚಂಡ ಕುಟುಂಬ ಚಂಗುಲAಡವನ್ನು ೫-೨ ಗೋಲುಗಳ ಅಂತರದಿAದ ಮಣಿಸಿತು. ಮುರುವಂಡ ಮತ್ತು ಮುಕ್ಕಾಟಿರ (ಬೇತ್ರಿ) ತಂಡಗಳ ನಡುವಿನ ಪಂದ್ಯದಲ್ಲಿ ಮರುವಂಡ ೪-೦ ಅಂತರದಲ್ಲಿ ಗೆಲುವು ದಾಖಲಿಸಿತು.

ಬಾರಿಯಂಡ ತಂಡವು ಕುಮ್ಮಂಡ ತಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ಪುಟ್ಟಿಚಂಡ ತಂಡವು ಚೌರೀರ (ಹೊದವಾಡ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಟ್ಟಿಚಂಡ ತಂಡವು ವಾಕ್‌ಓವರ್‌ನಲ್ಲಿ ಜಯಗಳಿಸಿತು. ಚೆಕ್ಕೆರ ತಂಡವು ಪಾಲೆಕಂಡ ತಂಡವನ್ನು ೫-೪ ಗೋಲುಗಳ ಅಂತರದಿAದ ಮಣಿಸಿತು. ಪಾಲೆಯಂಡ ವಿರುದ್ಧ ಮಂಡೇಟಿರ ತಂಡವು ಜಯಗಳಿಸಿತು. ಕೋಳೆರ ಮತ್ತು ಮಾತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾತಂಡ ತಂಡವು ಜಯಗಳಿಸಿತು. ಕನ್ನಂಡ ತಂಡವು ಮಾಚಂಗಡ ತಂಡವನ್ನು ೫-೩ ಗೋಲುಗಳ ಅಂತರದಿAದ ಸೋಲಿಸಿತು. ಕುಪ್ಪಂಡ (ಕೈಕೇರಿ) ಮತ್ತು ಮೇಚಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ ೪-೩ ಗೋಲುಗಳ ಅಂತರದಿAದ ಜಯ ಸಾಧಿಸಿತು. ನೆರವಂಡ ಮತ್ತು ಪೊರುಕೊವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆರವಂಡ ತಂಡವು ೨-೧ ಗೋಲುಗಳ ಅಂತರದಿAದ ಜಯಗಳಿಸಿತು. ಕುಲ್ಲೇಟಿರ ತಂಡವು ಚೌರಿರ ತಂಡವನ್ನು ೪-೨ ಗೋಲುಗಳ ಅಂತರದಿAದ ಪರಾಭವ ಗೊಳಿಸುವದರ ಮೂಲಕ ಮುಂದಿನ ಸುತ್ತು ಪ್ರವೇಶಿಸಿತು.