ಸುಂಟಿಕೊಪ್ಪ, ಡಿ. ೨೬: ಕುಶಾಲನಗರ ಸೇಕ್ರೆಡ್ ಹಾರ್ಟ್ ಪತ್ತಿನ ಸಹಕಾರ ಸಂಘ ೨ ವರ್ಷ ಪೂರೈಸಿದ್ದು ಪ್ರಸ್ತುತ ಸಾಲಿನಲ್ಲಿ ರೂ. ೪೨,೭೩೨ ಲಾಭಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಸಂಘದ ಅಧ್ಯಕ್ಷ ಆಲ್ಬರ್ಟ್ ಡಿಸೋಜ ಹೇಳಿದರು.
ಕುಶಾಲನಗರ ಸೇಕ್ರೆಡ್ ಹಾರ್ಟ್ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಫಾತಿಮಾ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಘದಲ್ಲಿ ೩೬೦ ಮಂದಿ ಸದಸ್ಯರುಗಳ ಪಾಲು ಬಂಡವಾಳ ರೂ. ೪,೯೩,೫೦೦ ಸಂಗ್ರಹವಾಗಿದೆ. ನಿರಖು ಠೇವಣಿ ರೂ. ೨ ಲಕ್ಷ ಸಂದಾಯವಾಗಿದೆ. ೨೩ ಸದಸ್ಯರುಗಳಿಗೆ ರೂ ೧೨.೧೩ ಲಕ್ಷಗಳ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕುಶಾಲನಗರ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮಗುರು ಸ್ವಾಮಿ ಎಂ. ಮಾರ್ಟಿನ್ ಅವರಿಂದ ನಿರಖು ಠೇವಣಿದಾರರಿಗೆ ದೃಢೀಕರಣ ಪತ್ರವನ್ನು ವಿತರಿಸಿದರು.
ಇದೇ ಸಂದರ್ಭ ಕುಶಾಲನಗರ ಸೇಕ್ರೆಡ್ ಹಾರ್ಟ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮಗುರುಗಳಾದ ಸ್ವಾಮಿ ಎಂ. ಮಾರ್ಟಿನ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಐ.ಡಿ. ರಾಯ್, ನಿರ್ದೇಶಕರುಗಳಾದ ಜೆ. ಫಿಲಿಪ್, ಅಂತೋನಿ ಜೋಸೆಫ್, ಫಿಲಿಪ್ ವಾಸ್, ಪಿಲೋಮಿನ ಜಾರ್ಜ್, ಬಿ.ಎಸ್. ಶಾಂತಪ್ಪ, ರೋಸ್ಮೇರಿ ರಾಡ್ರಿಗಸ್, ಎನ್.ಕೆ. ಗ್ರೇಸಿ, ವಿ.ಎ. ಲಾರೆನ್ಸ್, ನಿರ್ದೇಶಕರುಗಳಾದ ಶಾಜಿ ಕೆ. ಜಾರ್ಜ್, ಬಿನಾಯ್ ವಿ.ವಿ., ಆಲ್ಬರ್ಟ್ ಗೋನ್ಸಾಲ್ವೇಸ್ ಇದ್ದರು.