ಮಡಿಕೇರಿ, ಡಿ. ೨೬: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪದವಿ ಕಾಲೇಜಿನ ಒಟ್ಟು ೧೪ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಹಾಕಿ ತಂಡದಲ್ಲಿ ಸ್ಥಾನ ಗಳಿಸಿಕೊಂಡಿದ್ದಾರೆ.

ಬಾಲಕರ ಹಾಕಿ ತಂಡದಲ್ಲಿ ಕಾಲೇಜಿನ ೫ ಮತ್ತು ಮಹಿಳೆಯರ ಹಾಕಿ ತಂಡದಲ್ಲಿ ೯ ವಿದ್ಯಾರ್ಥಿಗಳು ಆಟಗಾರರಾಗಿ ಪ್ರತಿನಿಧಿಸಲಿದ್ದಾರೆ.

ಬಾಲಕರ ತಂಡಕ್ಕೆ ಆಕಾಶ್ ಅಪ್ಪಚ್ಚು, ಸುಜಯ್, ಪ್ರಸಾದ್ .ಜೆ, ಬೋಪಣ್ಣ, ನಾಣಯ್ಯ ಎಂ.ಡಿ ಆಯ್ಕೆಯಾದರೆ ಬಾಲಕಿಯರ ತಂಡದಲ್ಲಿ ದೀಪ್ತಿ ಕೆ.ಎ., ಪಾರ್ವತಿ ಕೆ.ಎ, ಲಿಖಿತ ಎಸ್.ಪಿ., ಸಯಾ ಕಾವೇರಮ್ಮ, ಸಿಂಚನ ಎಚ್.ಪಿ., ಲೀಲಾವತಿ ಕೊಪ್ಪದ್, ಅರ್ಪಿತ ಪಿ.ಎನ್., ಧÀನುಶ್ರೀ ಹೆಚ್.ಜಿ., ಅಪ್ಸರ ಹೆಚ್.ಎ. ಸ್ಥಾನಗಿಟ್ಟಿಸಿಕೊಂಡಿದ್ದಾರೆ.