ಕಣಿವೆ, ಡಿ. ೨೬: ಭಾರತೀಯ ವಾಯುಸೇನೆಯ (ಕಾಮನ್ ಡಿಫೆನ್ಸ್ ಸರ್ವೀಸ್) ಫ್ಲೆಯಿಂಗ್ ಆಫೀಸರ್ ಹುದ್ದೆಗೆ ಕುಶಾಲನಗರದ ಬಿ.ಪಿ. ಸಚಿನ್ ಆಯ್ಕೆಯಾಗಿದ್ದಾರೆ.

ಕೇಂದ್ರೀಯ ಲೋಕಸೇವಾ ಆಯೋಗ ನಡೆಸುವ ಸಿಡಿಎಸ್ (ಕಾಮನ್ ಡಿಫೆನ್ಸ್ ಸರ್ವಿಸ್) ಪರೀಕ್ಷೆಯಲ್ಲಿ ರಾಷ್ಟಿçÃಯ ಮಟ್ಟದಲ್ಲಿ ೯ನೇ ರ‍್ಯಾಂಕ್ ಗಳಿಸಿ ಏರ್ ಫೋರ್ಸ್ಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಇನ್ಸಿಟ್ಯೂಟ್ ಆಫ್ ಏರೋ ಸ್ಪೇಸ್ ಮೆಡಿಸಿನ್ ಸಂಸ್ಥೆಯಲ್ಲಿ ೬ ದಿನಗಳ ವಿವಿಧ ರೀತಿಯ ಮೆಡಿಕಲ್ ಪರೀಕ್ಷೆಗೆ ಒಳಪಟ್ಟ ಸಚಿನ್ ನಂತರ ಡಿಕ್ಲೇರ್ಡ್ ಫಿಟ್ ಪಾರ್ ಫ್ಲೆöÊಯಿಂಗ್ ಎನ್ನುವ ಅರ್ಹತೆಯನ್ನು ಪಡೆದ ಅಭ್ಯರ್ಥಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇವರು ಕುಶಾಲನಗರದ ರಥಬೀದಿಯಲ್ಲಿ ಸಚಿನ್ ಗಾರ್ಮೆಂಟ್ಸ್ ಎಂಬ ಬಟ್ಟೆ ಅಂಗಡಿ ನಡೆಸುತ್ತಿರುವ ಪ್ರಸನ್ನ ಕುಮಾರ್ ಬೊಂಬಾರೆ ಮತ್ತು ಜಿ. ವಾಣಿಯವರ ಪುತ್ರ. (ವರದಿ: ಕೆ.ಎಸ್. ಮೂರ್ತಿ)