ಮಡಿಕೇರಿ, ಡಿ. ೨೬: ಇತ್ತೀಚೆಗೆ ಅಗಲಿದ ಹಿರಿಯ ಚತುರ್ಭಾಷಾ ಸಾಹಿತಿ, ಮುಲ್ಲೇಂಗಡ ಬೇಬಿ ಚೋಂದಮ್ಮ ಅವರಿಗೆ ಕೊಡವಾಮೆರ ಕೊಂಡಾಟ ಸಂಘಟನೆ, ಅಕ್ಷರ ನಮನ ಸಲ್ಲಿಸಲು ನಿರ್ಧರಿಸಿದೆ. ಮೂಲತಃ ಗಡಿನಾಡ್ ಶಿರಂಗಳ್ಳಿಗೆ ಸೇರಿದ ಬೆಂಗಳೂರು ಉದ್ಯಮಿ ಸರ್ಕಂಡ ಸೋಮಯ್ಯ ಅವರ ಪ್ರಾಯೋಜಕತ್ವದಲ್ಲಿ, ನಡೆಯುವ ಸ್ಪರ್ಧೆಯಲ್ಲಿ 'ಮುಲ್ಲೇಂಗಡ ಬೇಬಿ ಚೋಂದಮ್ಮ ಬದುಕು ಮತ್ತು ಸಾಹಿತ್ಯ' ಎಂಬ ವಿಚಾರದಲ್ಲಿ, ಜಾತಿ, ಧರ್ಮ, ಲಿಂಗ, ವಯಸ್ಸಿನ ಅಂತರವಿಲ್ಲದೆ, ೧೫೦೦ ಪದಗಳಿಗೆ ಮೀರದಂತೆ ಕೊಡವ ಭಾಷೆಯಲ್ಲಿ ಟೈಪ್ ಮಾಡಿದ ಅಥವಾ ಹಾಳೆಯಲ್ಲಿ ಬರೆದು, ಸ್ಪಷ್ಟವಾಗಿ ಫೋಟೊ ತೆಗೆದು ಸ್ಪರ್ಧಾ ಸಂಚಾಲಕ ಮಲ್ಲಂಡ ದರ್ಶನ್ ಮುತ್ತಪ್ಪ ಅವರ ವಾಟ್ಸಪ್ ಸಂಖ್ಯೆ ೯೪೪೯೬೯೯೮೨೬ಗೆ ದಿನಾಂಕ ೦೫.೦೧.೨೦೨೨ರ ರಾತ್ರಿ ೧೦ ಗಂಟೆಯ ಒಳಗೆ ಕಳುಹಿಸಿಕೊಡಬೇಕು. ವಿಜೇತರಿಗೆ ಪ್ರಥಮ ೨೦೦೦, ದ್ವಿತೀಯ ೧೫೦೦, ತೃತೀಯ ೧೦೦೦ ರೂ, ಗಳ ನಗದು ಬಹುಮಾನ ಹಾಗೂ ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು.

ಕೊಡವಾಮೆ ಹಾಗೂ ಸಾಹಿತ್ಯಕ್ಕಾಗಿ ದುಡಿದು ಮರೆಯಾದ ಹಿರಿಯ ಸಾಹಿತಿಗೆ ಅಕ್ಷರ ನಮನ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟನೆ ಕೋರಿದೆ.