ಕೂಡಿಗೆ, ಡಿ. ೨೪: ಕೂಡಿಗೆ ಗ್ರಾ. ಪಂ. ವ್ಯಾಪ್ತಿಯ ಜೇನುಕಲ್ಲು ಬೆಟ್ಟ (ಭುವನಗಿರಿ) ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೦-೨೧ ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ಈಗಾಗಲೇ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಘವು ಈ ಸಾಲಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಲಾಭಾಂಶ ಗಳಿಸಿದ್ದು ಅದರ ಮೂಲಕ ಸದಸ್ಯರಿಗೆ ಡಿವಿಡೆಂಟ್ ನೀಡಲಾಗು ತ್ತಿದೆ. ರೈತರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಹಾಕುವುದರ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಎಂದು ಚಂದ್ರಶೇಖರ್ ಹೇಳಿದರು. ಅತಿಥಿಯಾಗಿ ಆಗಮಿಸಿದ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಒಕ್ಕೂಟದಿಂದ ರೈತರಿಗೆ ಸಿಗುವ ಯೋಜನೆಗಳ ಬಗ್ಗೆ ಮತ್ತು ಹಸು ಸಾಕಾಣಿಕೆಯ ನೂತನ ವ್ಯವಸ್ಥೆಗಳ, ಪಶು ಆಹಾರ, ಪಶು ಚಿಕಿತ್ಸೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಕೆ.ಆರ್. ಜಗದೀಶ್, ನಿರ್ದೇಶಕರಾದ ಕೆ,ಎಸ್ ಜೋಯಪ್ಪ, ನಾಗರಾಜು, ಬಿ.ಆರ್. ಧರ್ಮದಾಸ್, ಶಂಕರನ್, ಅನ್ನಮ್ಮಬಿಜು, ಜ್ಯೋತಿ ವಿಜಯ್ ಕುಮಾರ್, ಎಸ್.ಆರ್. ಮಹೇಶ್, ಸಂಘದ ಕಾರ್ಯದರ್ಶಿ ಹೆಚ್.ಎಂ. ಬಸವರಾಜು ಮತ್ತಿತರರಿದ್ದರು.