ಕುಶಾಲನಗರ, ಡಿ. ೨೪: ಜೀವನದಿ ಕಾವೇರಿಯ ಸಂರಕ್ಷಣೆಗೆ ಹಾಗೂ ಸ್ವಚ್ಛತೆಗೆ ಎಲ್ಲರೂ ಪಣತೊಡ ಬೇಕೆಂದು ಇಲ್ಲಿನ ಕೊಡವ ಸಮಾಜದ ಅಧ್ಯಕ್ಷ ಮಂಡೇಪAಡ ಬೋಸ್ ಮೊಣ್ಣಪ್ಪ ಕರೆ ನೀಡಿದರು. ಇಲ್ಲಿನ ಕಾವೇರಿ ಮಹಾಆರತಿ ಬಳಗದ ಆಶ್ರಯದಲ್ಲಿ ನಡೆದ ೧೨೬ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಹಲವು ರೀತಿ ಯಲ್ಲಿ ಕಾವೇರಿ ನದಿಯ ಮೂಲ ಸ್ವರೂಪ ಬದಲಾಗುತ್ತಿದ್ದು ನದಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆರತಿ ಅಂಗ ವಾಗಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಅಷ್ಟೋತ್ತರ, ಪೂಜಾ ವಿಧಿವಿಧಾನಗಳನ್ನು ನಡೆಸಿ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು. ಮುಂದಿನ ದಿನಗಳಲ್ಲಿ ಸರಕಾರದ ಮೂಲಕ ನಡೆಯಲಿರುವ ಕಾವೇರಿ ನದಿಯ ಉತ್ಸವದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಅಧ್ಯಕ್ಷ ಚಂದ್ರಮೋಹನ್ ಮನವಿ ಮಾಡಿದರು. ಆರತಿ ಬಳಗದ ಅಧ್ಯಕೆÀ್ಷ ವನಿತಾ ಚಂದ್ರಮೋಹನ್, ನದಿ ಜಾಗೃತಿ ಸಮಿತಿಯ ಸೋಮಶೇಖರ್, ಕೇರಳ ಸಮಾಜದ ಅಧ್ಯಕ್ಷರಾದ ಶಿವಾನಂದನ್, ವಿ.ಆರ್ ಶಿವಶಂಕರ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಕೆ. ಜಗದೀಶ್ ಮತ್ತಿತರರಿದ್ದರು.