ಮಡಿಕೇರಿ, ಡಿ. ೨೫: ಜಿಲ್ಲೆಯ ಮರಾಠ/ಮರಾಟಿ ಸಮಾಜ ಬಾಂಧವರಿಗಾಗಿ ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮನೋರಂಜನಾ ಸಂಘ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆದ ೭ನೇ ವರ್ಷದ ಗ್ರಾಮೀಣ ಕ್ರೀಡಾಕೂಟಕ್ಕೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕಳೆದ ೭ ವರ್ಷಗಳಿಂದ ಸಂಘಟನೆ ಕ್ರೀಡಾಕೂಟ ಆಯೋಜಿಸುತ್ತಾ ಬರುತ್ತಿದ್ದು, ಯುವ ಜನತೆಯ ಒಗ್ಗೂಡುವಿಕೆಗೆ ಇದು ಸಹಕಾರಿ ಯಾಗಿದೆ. ಮರಾಠಿ ಸಮುದಾಯಕ್ಕೆ ನೆಲೆ ಸಿಗಬೇಕೆಂಬ ಉದ್ದೇಶದಿಂದ ಭವ್ಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಅನುದಾನ ದೊರಕಿಸಿ ಕೊಡುವಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕೊರೊನಾದಿಂದಾಗಿ ಕಳೆದೆರಡು ವರ್ಷಗಳಿಂದ ಕ್ರೀಡಾಕೂಟಗಳೇ ನಿಂತು ಹೋಗಿತ್ತು. ಕೋವಿಡ್ ಪ್ರಕರಣ ಕಡಿಮೆಯಾಗಿದ್ದರಿಂದ ಕೆಲವೆಡೆ ಕ್ರೀಡಾ ಚಟುವಟಿಕೆಗಳು ಆರಂಭಗೊAಡಿದೆ. ಆದರೆ ಕೊರೊನಾ ೩ನೇ ಅಲೆಯ ಆತಂಕ ಎದುರಾಗಿದ್ದು, ಇತ್ತೀಚೆಗೆ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಜಿಲ್ಲಾ ಮರಾಠ/ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎA.ಪರಮೇಶ್ವರ್ ಅಧ್ಯಕ್ಷತೆ ವಹಿಸಿ ಮಾತನಾಡಿ,

(ಮೊದಲ ಪುಟದಿಂದ) ಜನಾಂಗಬಾAಧವರನ್ನು ಒಗ್ಗೂಡಿಸುವ ಸಲುವಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡಾಕೂಟ ದಿಂದ ವಿಚಾರವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮದೆ ಗ್ರಾ.ಪಂ ಸದಸ್ಯರಾದ ಪಿ.ಕೆ. ಜೀವನ್, ಬಿ.ಎಸ್. ನವೀನಾ, ಕಟ್ಟಡ ಸಮಿತಿ ಅಧ್ಯಕ್ಷ ಗುರುವಪ್ಪ, ಸದಸ್ಯ ಎಂ.ಕೆ. ಬಾಬು, ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಯುವಕ ಸಂಘದ ಅಧ್ಯಕ್ಷ ಎಂ.ಆರ್. ಮೋಹನ್, ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ. ದೇವಪ್ಪ, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ ಇದ್ದರು.

ತಂಡಗಳು ಮುಂದಿನ ಸುತ್ತಿಗೆ

ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ೭ನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಅಂಚ್ಚಿ ಗೈಯ್ಸ್, ಅಂಬಾ ಭವಾನಿ ಗುಡ್ಡೆಹೊಸೂರು, ಮರಾಠಿ ರಾಯಲ್ಸ್ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ದಿನದ ಮೊದಲ ಪಂದ್ಯಾಟದಲ್ಲಿ ಟಾಸ್ ಸೋತ ಓಂ ಶಕ್ತಿ ಕರಿಕೆ ತಂಡ ನಿಗದಿತ ೬ ಓವರ್ ನಲ್ಲಿ ೩ ವಿಕೆಟ್ ಕಳೆದುಕೊಂಡು ೫೨ ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಅಂಚ್ಚಿ ಗೈಯ್ಸ್ ತಂಡ ೨ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮತ್ತೊಂದು ಪಂದ್ಯದಲ್ಲಿ ಟಾಸ್ ಸೋತ ರಾಯಲ್ ಪ್ರೆಂಡ್ಸ್ ಕರಿಕೆ ತಂಡ ೪ ವಿಕೆಟ್ ಕಳೆದುಕೊಂಡು ೩೩ ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಮರಾಠಿ ರಾಯಲ್ಸ್ ಕೊಡಗು ತಂಡ ೧ ವಿಕೆಟ್ ಕಳೆದುಕೊಂಡು ವಿಜಯ ಪತಾಕೆ ಹಾರಿಸಿತು.

ಟಾಸ್ ಗೆದ್ದ ಶಿವಾಜಿ ಬಿ ತಂಡ ೭ ವಿಕೆಟ್ ಕಳೆದುಕೊಂಡು ೪೫ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಶಿವಾಜಿ ಸ್ಟೆçöÊಕರ್ಸ್ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಮತ್ತೊಂದು ಪಂದ್ಯದಲ್ಲಿ ಟಾಸ್ ಗೆದ್ದ ಪಿಂಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡ ೫ ವಿಕೆಟ್ ಕಳೆದುಕೊಂಡು ೫೯ ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಶಿವಾಜಿ ಬ್ರದರ್ಸ್ ತಂಡ ೬ ವಿಕೆಟ್ ಗಳ ಜಯ ಸಾಧಿಸಿತು.

ಟಾಸ್ ಗೆದ್ದ ಗೂಗ್ಲಿ ಬಾಯ್ಸ್ ತಂಡ ೨ ವಿಕೆಟ್ ಕಳೆದುಕೊಂಡು ೮೩ ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಹುಲಿತಾಳ ತಂಡ ೩ ವಿಕೆಟ್ ಗೆ ೪೮ ದಾಖಲಿಸಿ ಸೋಲುಂಡಿತು. ಮತ್ತೊಂದು ಪಂದ್ಯದಲ್ಲಿ ಟಾಸ್ ಗೆದ್ದ ಎ.ವಿ.ಜಿ. ಅವರೆಗುಂದ ತಂಡ ೭ ವಿಕೆಟ್ ಕಳೆದುಕೊಂಡು ೬೩ ರನ್ ದಾಖಲಿಸಿತು. ಅಂಬಾ ಭವಾನಿ ಗುಡ್ಡೆಹೊಸೂರು ತಂಡ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು.

ಟಾಸ್ ಸೋತ ಶಿವಾಜಿ ಸ್ಟೆçöÊಕರ್ಸ್ ತಂಡ ೫ ಒವರ್ ಗಳಲ್ಲಿ ೪೯ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಮರಾಠಿ ರಾಯಲ್ಸ್ ತಂಡ ೧ ವಿಕೆಟ್‌ಗೆ ಗೆಲುವಿನ ನಗೆ ಬೀರಿತು. ಮತ್ತೊಂದು ಪಂದ್ಯದಲ್ಲಿ ಟಾಸ್ ಗೆದ್ದ ಗೂಗ್ಲಿ ಬಾಯ್ಸ್ ತಂಡ ೪ ವಿಕೆಟ್‌ಗೆ ೩೯ ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಶಿವಾಜಿ ಬ್ರದರ್ಸ್ ತಂಡ ೪ ವಿಕೆಟ್‌ಗೆ ೩೯ ದಾಖಲಿಸಿದ ಪರಿಣಾಮ ಪಂದ್ಯಾಟ ಡ್ರಾದಲ್ಲಿ ಅಂತ್ಯಗೊAಡಿತ್ತು.

ಇಂದಿನ ಆಟೋಟಗಳು

ಅಂಚ್ಚಿ ಗೈಯ್ಸ್, ಅಂಬಾ ಭವಾನಿ ಗುಡ್ಡೆಹೊಸೂರು, ಮರಾಠಿ ರಾಯಲ್ಸ್ ಕೊಡಗು ತಂಡಗಳು ಸೆಮಿಫೈನಲ್ ನಲ್ಲಿ ಹಣಾಹಣಿ ನಡೆಸಲಿದೆ. ಡ್ರಾದಲ್ಲಿ ಅಂತ್ಯಗೊAಡ ಶಿವಾಜಿ ಬ್ರದರ್ಸ್ ಹಾಗೂ ಗೂಗ್ಲಿ ಬಾಯ್ಸ್ ತಂಡದ ನಡುವೆ ಸೆಮಿಫೈನಲ್ ಗೆ ಸುಪರ್ ಒವರ್ ಪಂದ್ಯಾಟ ನಡೆಯಲಿದೆ. ನಂತರ ವಾಲಿಬಾಲ್, ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ಸೇರಿದಂತೆ ನಿಂಬೆ ಚಮಚ ಓಟ, ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆ, ಕಾಳು ಹೆಕ್ಕುವ ಸ್ಪರ್ಧೆ, ಗೋಣಿಚೀಲ ಜಿಗಿತ, ಸಂಗೀತ ಕುರ್ಚಿ, ಭಾರದ ಗುಂಡು ಎಸೆತ ಇತ್ಯಾದಿ ಕ್ರೀಡಾಕೂಟ ನಡೆಯಲಿದೆ.