ಮಡಿಕೇರಿ, ಡಿ. ೨೪: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಸಂಬAಧ ರೈತರು ತಮ್ಮ ಹೆಸರು ನೋಂದಾಯಿಸುವAತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ. ರೈತರು ಬೆಂಬಲ ಬೆಲೆಯಡಿ ಅವಕಾಶ ಪಡೆಯುವಂತಾಗಲು ಕುಶಾಲನಗರದ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕಿದೆ. ಒಂದು ಕ್ವಿಂಟಾಲ್ ರಾಗಿಗೆ ೩,೩೭೭ ರೂ. ಬೆಂಬಲ ಬೆಲೆ ನಿಗದಿಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಾಗನಾಯಕ್ ರಾಗಿಯನ್ನು ಕುಶಾಲನಗರ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು ಭಾಗಗಳಲ್ಲಿ ಬೆಳೆಯುತ್ತಾರೆ. ಹಾಗೆಯೇ ಗಡಿಭಾಗದ ಬೆಟ್ಟದಪುರ ಕಡೆಯಿಂದಲೂ ಬೆಂಬಲ ಬೆಲೆಯಡಿ ರಾಗಿ ನೀಡಲು ಕೃಷಿಕರು ಮುಂದೆ ಬರುತ್ತಾರೆ ಎಂದು ಮಾಹಿತಿ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ
ಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ರಾಗಿ ಖರೀದಿ ಸಂಬAಧಿಸಿದAತೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿಗಳು ಸರ್ಕಾರದ ನಿರ್ದೇಶನದಂತೆ ರಾಗಿ ಖರೀದಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳದ ವ್ಯವಸ್ಥಾಪಕ ಜಯಶಂಕರ, ರಾಗಿ ಖರೀದಿ ಸಂಬAಧಿಸಿದAತೆ ಹಲವು ಮಾಹಿತಿ ನೀಡಿದರು. ಬೆಳೆ ಹಾನಿ ಸಮೀಕ್ಷೆ ಸಂಬAಧಿಸಿದAತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಂದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ಪಡೆದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್, ಸಹಾಯಕ ನಿರ್ದೇಶಕರಾದ ರೀಟಾ, ಗೌರಿ, ಇತರರು ಇದ್ದರು.