ನಾಪೋಕ್ಲು, ಡಿ. ೨೪: ನಗರದ ಮಾರು ಕಟ್ಟೆಯ ಬಳಿಯಲ್ಲಿ ರಸ್ತೆ ಬದಿಯಲ್ಲಿರು ಟ್ರಾನ್ಸ್ ಫಾರ್ಮರ್ ಗಿಡ ಬಳ್ಳಿಗಳಿಂದ ಆವೃತ್ತ ವಾಗಿದ್ದು ರಸ್ತೆಯ ಬದಿಯಲ್ಲೆ ಇರುವುದ ರಿಂದ ಶಾಲಾ ಕಾಲೇಜು ಮತ್ತು ದಾರಿ ಹೋಕರು ಇದರ ಬದಿಯಲ್ಲೆ ನಡೆದಾಡು ತ್ತಿದ್ದು ಅಪಾಯದಲ್ಲಿದೆ. ಚೆಸ್ಕಾಂ ಇಲಾಖೆ ಯವರು ಕೂಡಲೇ ಇದನ್ನು ಸ್ವಚ್ಛಗೊಳಿಸಿ ಮುಂದಾಗುವ ಅಪಾಯವನ್ನು ತಪ್ಪಿಸ ಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.