ಮಡಿಕೇರಿ, ಡಿ. ೨೫: ಜಿಲ್ಲೆಯಾದ್ಯಂತ ಶಾಂತಿ-ಸಾಮರಸ್ಯದೊAದಿಗೆ ಕ್ರೆöÊಸ್ತ ಸಮುದಾಯ ಬಾಂಧವರು ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಭಾಗಿಗಳಾದರು. ತಾ. ೨೪ರ ರಾತ್ರಿಯಿಂದಲೇ ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಬಾಲ ಏಸುವಿನ ಆರಾಧನೆ ಆಡಂಬರ ಬಲಿಪೂಜೆ, ಸಾಮೂಹಿಕ ಪ್ರಾರ್ಥನೆಗಳು ಜರುಗಿದವು. ಎಲ್ಲಾ ಚರ್ಚ್ಗಳು ವಿದ್ಯುತ್ ಅಲಂಕಾರದೊAದಿಗೆ ಕಂಗೊಳಿಸಿದರೆ, ಮನೆ ಮನೆಗಳಲ್ಲಿ ‘ಸ್ಟಾರ್’ನ ಬೆಳಕು ಹಬ್ಬಕ್ಕೆ ಕಳೆ ಒದಗಿಸಿತ್ತು.

ಪ್ರಸಕ್ತ ವರ್ಷವೂ ಸರಳ ಕಾರ್ಯಕ್ರಮವಾದರೂ, ಧಾರ್ಮಿಕವಾದ ವಿಧಿ - ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಕ್ರೆöÊಸ್ತ ಸಮುದಾಯದವರು ಏಸುವಿನ ಆರಾಧನೆಯಲ್ಲಿ ತೊಡಗಿಸಿಕೊಂಡರು. ಜಿಲ್ಲೆಯಲ್ಲಿ ಸುಮಾರು ೧೯ ರೋಮನ್ ಕ್ಯಾಥೋಲಿಕ್ ಚರ್ಚ್ಗಳು ಹಾಗೂ ೭ಕ್ಕೂ ಅಧಿಕ ಸೌತ್ ಇಂಡಿಯನ್ (ಸಿಎಸ್‌ಐ) ಚರ್ಚ್ಗಳಿದ್ದು ಎಲ್ಲೆಡೆ ಸಾಮೂಹಿಕವಾಗಿ ಪ್ರಾರ್ಥನೆಗಳು - ಶುಭ ಹಾರೈಕೆಗಳ ವಿನಿಮಯದೊಂದಿಗೆ ಹಬ್ಬಾಚರಣೆ ಜರುಗಿತು.

ಮಡಿಕೇರಿಯ ಸಂತ ಮೈಕಲ್, ಕುಶಾಲನಗರದ ಸಂತ ಸಬಾಸ್ಟಿನ್, ಸುಂಟಿಕೊಪ್ಪದ ಸಂತ ಅಂತೋಣಿ, ವೀರಾಜಪೇಟೆ ಸಂತ ಅನ್ನಮ್ಮ, ಸೋಮವಾರಪೇಟೆಯ ಒ.ಎಲ್.ವಿ., ಪೊನ್ನಂಪೇಟೆಯ ಸೆಂಟ್ ಅಂಟೋನಿ, ಚೆಟ್ಟಳ್ಳಿಯ ಸಂತ ಸಬಾಸ್ಟಿನ್, ಸಿದ್ದಾಪುರದ ಸಂತ ಜೋಸೆಫ್, ಗೋಪಾಲಪುರ, ಶನಿವಾರಸಂತೆ, ಗೌಡಳ್ಳಿ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಅಲ್ಲಲ್ಲಿನ ಧರ್ಮಗುರುಗಳ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆದವು.(ಮೊದಲ ಪುಟದಿಂದ)

ಸAತ ಅನ್ನಮ್ಮ ದೇವಾಲಯ

ವೀರಾಜಪೇಟೆ : ನಗರದ ಐತಿಹಾಸಿಕ ಸಂತ ಅನ್ನಮ್ಮ ದೇವಾಲಯದಲ್ಲಿ ಸರಳವಾಗಿ ಹಾಗೂ ಶ್ರದ್ಧಾ ಭಕ್ತಿಯಿಂದ ಕ್ರಿಸ್‌ಮಸ್ ಆಚರಿಸಲಾಯಿತು .ಶುಕ್ರವಾರ ರಾತ್ರಿ ಕೀರ್ತನೆಗಳ ಗಾಯನ ಆರಂಭಗೊAಡು ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆವರೆಂಡ್ ಫಾದರ್ ಮಧಲೈ ಮುತ್ತು, ಫಾದರ್ ರಿಚರ್ಡ್ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ಬಳಿಕ ಕ್ರಿಸ್‌ಮಸ್ ಹಬ್ಬದಂದು ಬೆಳಿಗ್ಗೆ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯನ್ನು ಭಕ್ತಾಧಿಗಳ ಸಮ್ಮುಖದಲ್ಲಿ ಕೊರೊನಾ ಮಾರ್ಗಸೂಚಿ ಅನುಸಾರ ನಡೆಸಲಾಯಿತು.

ನಾಡಿನ ಜನರ ಒಳಿತಿಗಾಗಿ, ರಾಷ್ಟç ಹಾಗೂ ರಾಜ್ಯದ ಒಳಿತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಎಂದು ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮಧಲೈ ಮುತ್ತು ತಿಳಿಸಿದರು. ಸಂತ ಅನ್ನಮ್ಮ ದೇವಾಲಯವನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಮಡಿಕೇರಿ : ಅಮ್ಮತ್ತಿಯಲ್ಲಿ ಕ್ರೆöÊಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಇಲ್ಲಿನ ಸಂತ ಅಂತೋಣಿ ಚರ್ಚ್ನಲ್ಲಿ ಧರ್ಮಗುರು ಫಾ. ರೈಮಂಡ್ ಅವರು ಅಲಂಕೃತ ಗೋದಲಿಯಲ್ಲಿ ಬಾಲ ಯೇಸುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರಾರ್ಥಿಸಿದರು. ಬಳಿಕ ಕೇಕ್ ಹಾಗೂ ಸಿಹಿ ಹಂಚಲಾಯಿತು. ಹಬ್ಬದ ಅಂಗವಾಗಿ ಚರ್ಚ್ ಅನ್ನು ವಿದ್ಯುತ್ ಬೆಳಕಿನ ಅಲಂಕಾರ, ಬಣ್ಣ ಬಣ್ಣದ ಬೆಲೂನ್ ಹಾಗೂ ಹೂವುಗಳಿಂದ ಸಿಂಗರಿಸಲಾಗಿತ್ತು. ನೂರಾರು ಮಂದಿ ಕ್ರೆöÊಸ್ತ ಬಾಂಧವರು ಚರ್ಚ್ಗೆ ಆಗಮಿಸಿ ಹಬ್ಬದ ಸಡಗರದಲ್ಲಿ ತೊಡಗಿದ್ದರು.ಸುಂಟಿಕೊಪ್ಪ: ಸಂತ ಅಂತೋಣಿ ದೇವಾಲಯದಲ್ಲಿ ಕ್ರೆöÊಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬವನ್ನು ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಕ್ರಿಸ್ತ ಜನಿಸಿದಾಗ ಮೂಡಿಬಂದ ತಾರೆಗಳನ್ನು ಅಳವಡಿಸಿ ಅಲಂಕಾರಗೊಳಿಸಲಾಗಿತ್ತು.

ತಾ. ೨೪ ರಂದು ರಾತ್ರಿ ೧೨ ಗಂಟೆಗೆ ಹಾಗೂ ೨೫ ರಂದು ಬೆಳಿಗ್ಗೆ ೮.೩೦ ಗಂಟೆಗೆ ಸಂತ ಅಂತೋಣಿ ದೇವಾಲಯದ ಯೇಸುವಿನ ಜನನದ ಸ್ಥಳವಾದ ಗೋದಾಲಿ (ದನಕೊಟ್ಟಿಗೆ)ಯನ್ನು ನಿರ್ಮಿಸಿ ಬಾಲಯೇಸುವನ್ನು ಪ್ರತಿಷ್ಠಾಪಿಸಿ ನಂತರ ವಿಶೇಷ ಗಾಯನ ಬಲಿ ಅರ್ಪಣೆಯನ್ನು ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್ ಹಾಗೂ ಕೂಡಿಗೆ ತಪೋವನ ಆಶ್ರಮದ ಸೂಪಿರಿಯರ್ ಜಾನ್‌ಪಿಂಠೋ ಅವರುಗಳು ನೆರವೇರಿಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ಕ್ರೆöÊಸ್ತ ಭಾಂದವರು ಈ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿ ಆಶೀರ್ವಚನ ಪಡೆದು ನಂತರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮನೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿಕೊಂಡರು.ಗೋಪಾಲಪುರ ಚರ್ಚ್

ಮುಳ್ಳೂರು : ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಮೀಪದ ಗೋಪಾಲಪುರ ಸಂತ ಅಂಥೋಣಿ ಚರ್ಚ್ನಲ್ಲಿ ಕ್ರೆöÊಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಕ್ರಿಸ್‌ಮಸ್ ಆಚರಣೆ ಮಾಡಿದರು

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ ಗೋಪಾಲಪುರ ಗ್ರಾಮದ ಸಂತ ಅಂಥೋಣಿ ಚರ್ಚ್ನಲ್ಲಿ ಶ್ರದ್ಧಾಭಕ್ತಿ ಮತ್ತು ಸಡಗರ ಸಂಭ್ರಮದಿAದ ಕ್ರೆöÊಸ್ತ ಸಮುದಾಯದ ಬಾಂಧವರು ಯೇಸು ರಾಜನ ಜನನದ ಕ್ರಿಸ್‌ಮಸ್ ಹಾಡುಗಳನ್ನು ಹಾಡಿದರು. ರಾತ್ರಿ ೧೧.೩೦ ಗಂಟೆಗೆ ಬಲಿಪೂಜೆಯನ್ನು ಚರ್ಚಿನ ಧರ್ಮಗುರು ಜಾಕಬ್ ಕೊಳನೂರು ನೆರವೇರಿಸಿದರು. ಈ ಸಂದರ್ಭ ಬಾಲಯೇಸುವಿನ ಪ್ರತಿಮೆಯನ್ನು ಗೋದಲಿಯಲ್ಲಿಟ್ಟು ಆರಾಧಿಸಿದರು. ಲೋಕಕಲ್ಯಾಣಕ್ಕೆ ಈ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.