ಪೊನ್ನAಪೇಟೆ, ಡಿ. ೨೪: ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಅಕಾಲ ಮೃತ್ಯು ಹೊಂದಿದ ಚೀಪ್ ಆಫ್ ದಿ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಅವರ ಮಡದಿ ಹಾಗೂ ಹನ್ನೆರಡು ಸೇನಾಧಿಕಾರಿಗಳ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಂಘದ ಕಚೇರಿ ಕಟ್ಟಡದ ಸಭಾಂಗಣದಲ್ಲಿ ಸಲ್ಲಿಸಿತು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ, ಮೌನಾಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಕ್ಕೇರ ಸನ್ನಿ ಸುಬ್ಬಯ್ಯ ವಹಿಸಿದ್ದರು. ಕಾಟಿಮಾಡ ಜಿಮ್ಮಿ ಅಣ್ಣಯ್ಯ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಮಂಡೇಚAಡ ಗಣೇಶ್ ಗಣಪತಿ, ತೀತೀರ ಜಯ ಅಯ್ಯಪ್ಪ, ಕೊಟ್ಟುಕತ್ತೀರ ಸೋಮಣ್ಣ, ಕೇಚಟ್ಟೀರ ಕಾಮುಣಿ ಪೂಣಚ್ಚ, ಕಳ್ಳಿಚಂಡ ಭೀಮಯ್ಯ, ಕುಪ್ಪುಡಿರ ದೇವಯ್ಯ, ಮಲ್ಲಂಡ ಸುಬ್ಬಯ್ಯ. ನಾಮೇರ ನಂಜಪ್ಪ, ಕೊಳ್ಳಿಮಾಡ ಕಾರ್ಯಪ್ಪ, ಚೇಂದಿರ ಬೋಪಣ್ಣ, ಕೋದೆಂಗಡ ರವಿ ಕಾರ್ಯಪ್ಪ, ಬೊಜ್ಜಂಗಡ ಜಪ್ಪು, ಗಾಂಡAಗಡ ಮಾಚಯ್ಯ ಇನ್ನಿತರ ಸದಸ್ಯರು ಹಾಜರಿದ್ದರು.