ಸೋಮವಾರಪೇಟೆ, ಡಿ. ೨೪: ಇಲ್ಲಿನ ಟೀಂ ಎಬಿಡಿ ವತಿಯಿಂದ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಿನಿ ಪ್ರಿಮಿಯರ್ ಲೀಗ್ ಪಂದ್ಯಾಟದಲ್ಲಿ ಟೀಂ ಆರ್‌ಸಿಬಿ ಬಜೆಗುಂಡಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ ವಿನೂತನ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬಜೆಗುಂಡಿ ತಂಡವು ಮುಂಬೈ ಇಂಡಿಯನ್ಸ್ ಕಕ್ಕೆಹೊಳೆ ತಂಡವನ್ನು ಮಣಿಸಿ ರೋಲಿಂಗ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೋಲಿಂಗ್ ಟ್ರೋಫಿಯೊಂದಿಗೆ ರೂ.೬೬೬೬ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೩೩೩೩ ನಗದು ವಿತರಿಸಲಾಯಿತು. ಪಂದ್ಯಾವಳಿಯಲ್ಲಿ ಶಿಸ್ತು ಬದ್ಧ ಆಟಗಾರನಾಗಿ ಮಧು, ಬೆಸ್ಟ್ ಕ್ಯಾಚರ್ ರಂಜನ್, ಬೆಸ್ಟ್ ಬೌಲರ್ ಅನಿಲ್, ಬೆಸ್ಟ್ ಬ್ಯಾಟ್ಸ್ಮೆನ್ ವಿಕ್ರಂ ಸಾಗರ್, ಬೆಸ್ಟ್ ಆಲ್‌ರೌಂಡರ್ ಚೇತನ್, ಗೇಮ್ ಚೇಂಜರ್ ಮಂಜು, ಬೆಸ್ಟ್ ಕೀಪರ್ ಹರೀಶ್, ಉತ್ತಮ ಹಿರಿಯ ಆಟಗಾರ ಪ್ರಕಾಶ್, ಉತ್ತಮ ನಾಯಕನಾಗಿ ಅರ್ಜುನ್ ಅವರುಗಳು ಹೊರಹೊಮ್ಮಿದರು. ಉತ್ತಮ ಶಿಸ್ತು ಬದ್ಧ ತಂಡದ ಪ್ರಶಸ್ತಿಗೆ ಕೆಕೆಆರ್ ಬಳಗುಂದ ತಂಡ ಆಯ್ಕೆಯಾಯಿತು.
ಸಮಾರೋಪ ಸಮಾರಂಭದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಸದಸ್ಯ ನತೀಶ್ ಮಂದಣ್ಣ, ಅಭಿಯಂತರ ಸೈಜನ್ ಪೀಟರ್, ಗುತ್ತಿಗೆದಾರ ಚೇತನ್ ಚೌಡ್ಲು, ಉದ್ಯಮಿ ಅರುಣ್ ಕೊತ್ನಳ್ಳಿ, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್ ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸಿದ್ದರು.
ಟೀಮ್ ಎ.ಬಿ.ಡಿ. ಬಿ.ಆರ್. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಸ್ಗರ್, ತಂಡದ ನಾಯಕ ಚೇತನ್ ಹಾಗೂ ಸದಸ್ಯರುಗಳು ಕ್ರೀಡಾಕೂಟ ಆಯೋಜಿಸಿದ್ದರು.