ಸೋಮವಾರಪೇಟೆ, ಡಿ. ೨೫: ಕಾಫಿ ತೋಟಗಳ ನಡುವೆ ಹಾದುಹೋಗಿರುವ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಸ್ಥಳಾಂತರಿಸುವAತೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ವಿದ್ಯುತ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಇಲ್ಲಿನ ಉಪವಿಭಾಗದ ಕಚೇರಿಯಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕ ಕುಂದು ಕೊರತೆ ಸಭೆಯಲ್ಲಿ ಈ ಬಗ್ಗೆ ಸಾರ್ವಜನಿಕರು ಸೆಸ್ಕ್ ಅಭಿಯಂತರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಧನಂಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ದೊಡ್ಡಮಳ್ತೆ, ಕಿಬ್ಬೆಟ್ಟ, ಕೂಗೆಕೋಡಿ, ಸುಳಿಮಳ್ತೆ, ಹೊನವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡು, ಕಳೆದ ನಾಲ್ಕು ವರ್ಷಗಳಿಂದ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಅಳವಡಿಸುವಂತೆ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಸ್ವಾತಂತ್ರö್ಯ ಪೂರ್ವದಲ್ಲಿ ಕಾಫಿ ತೋಟಗಳ ಮಧ್ಯೆ ಹಾದುಹೋಗಿರುವ ೧೧ಕೆ.ವಿ. ವಿದ್ಯುತ್ ಮಾರ್ಗ ಹಳೆಯದಾಗಿದೆ. ಮರಗಳ ನಡುವೆ ಹಾದುಹೋಗಿರುವುದರಿಂದ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಪ್ರಾಣ ಹಾನಿಯೂ ಆಗಿದೆ. ಶಿಥಿಲಾವಸ್ಥೆಯಲ್ಲಿರುವ ಮಾರ್ಗವನ್ನು ರಸ್ತೆ ಬದಿಗೆ ಅಳವಡಿಸುವಂತೆ ಮನವಿ ಸಲ್ಲಿಸುತ್ತಾ ಬಂದರೂ ಅಧಿಕಾರಿಗಳು ನಮಗೆ ಸಂಬAಧವೇ ಇಲ್ಲವೆಂಬAತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥ ಚಂದ್ರು ಆರೋಪಿಸಿದರು.
ಈ ಮಾರ್ಗವನ್ನು ರಸ್ತೆಯ ಬದಿಗೆ ಅಳವಡಿಸಲು ೩.೫ ಕಿ.ಮೀ ದೂರಕ್ಕೆ ರೂ. ೨೦ ಲಕ್ಷ ವೆಚ್ಚವಾಗುವುದು. ಅದನ್ನು ಈ ಸಾಲಿನ ಬಜೆಟ್‌ನಲ್ಲಿ ಸೇರಿಸಿ ಕಳುಹಿಸಲಾಗಿದೆ. ಹಣ ಬಂದ ನಂತರ ಮಾಡಿಕೊಡಲಾಗುವುದು ಎಂದು ಇಇ ಅಶೋಕ್ ಗ್ರಾಮಸ್ಥರಿಗೆ ಭರವಸೆ ನೀಡಿದರು.
ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾದ ನಂತರ ಜನರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಇಲಾಖೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ, ಕಾಟಾಚಾರಕ್ಕೆ ಸಭೆಗಳನ್ನು ಆಯೋಜಿಸುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಗಾಂಧಿನಗರದ ನಿವಾಸಿ ರಾಜು ಎಂಬವರ ಮನೆಗೆ ವಿಚಕ್ಷಣ ದಳದವರು ಆಗಮಿಸಿ ರೂ. ೮೦ ಸಾವಿರ ದಂಡ ವಿಧಿಸಿದ್ದಾರೆ. ಬಡ ಕುಟುಂಬದವರಾದ ರಾಜು ಜೀವನ ನಡೆಸಲು ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಪಕ್ಕದ ಮನೆಯವರಿಗೆ ವಿದ್ಯುತ್ ಸಂಪರ್ಕ ನೀಡಿದ್ದಾರೆ ಎಂದು ಆರೋಪಿಸಿ ದಂಡ ವಿಧಿಸ ಲಾಗಿದೆ. ಆದರೆ, ಪಕ್ಕದ ಮನೆಯª Àರೊಂದಿಗೆ ಇವರು ಮಾತನಾಡುವುದೇ ಇಲ್ಲ. ವಿದ್ಯುತ್ ಹೇಗೆ ನೀಡುತ್ತಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ಸಂದರ್ಭ ಕಾರ್ಯನಿರ್ವಾಹಕ ಇಂಜಿನಿಯರ್ ಧನಂಜಯ ಪ್ರತಿಕ್ರಿಯಿಸಿ ಮನೆಯ ಮಾಲೀಕರು ಬಂದು ದೂರು ನೀಡಿದರೆ, ಸ್ಥಳ ಪರಿಶೀಲಿಸಿ ಸರಿಪಡಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸೋಮವಾರಪೇಟೆ ಕಚೇರಿಯ ಇಂಜಿನಿಯರ್ ಮನುಕುಮಾರ್, ಶನಿವಾರಸಂತೆಯ ಹೇಮಂತ್‌ಕುಮಾರ್, ಕೊಡ್ಲಿಪೇಟೆಯ ಬಿ.ಎಂ. ಹಿರೇಮಠ್, ಶಾಂತಳ್ಳಿಯ ವಿಜಯಕುಮಾರ್, ಆಲೂರು ಸಿದ್ದಾಪುರದ ರಮೇಶ್ ಅವರುಗಳು ಉಪಸ್ಥಿತರಿದ್ದರು.