ಕರಿಕೆ, ಡಿ. ೨೫: ಮಡಿಕೇರಿ ಉಪ ವಿಭಾಗದ ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ಪಟ್ಟಿ ಘಾಟ್ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತೇಗದ ಮರ ಕಡಿದು ಸಂಗ್ರಹಿಸಿ ಇಟ್ಟಿದ್ದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಊರು ಬೈಲು ಯಂ ಚೆಂಬು ಗ್ರಾಮದ ಧರ್ಮಪಾಲ ಎಂಬಾತ ಅಕ್ರಮ ತೇಗದ ಮರ ಕಡಿದು ನಾಟಗಳನ್ನಾಗಿ ಪರಿವರ್ತಿಸಿಟ್ಟಿದ್ದ ಖಚಿತವಾದ ಮಾಹಿತಿ ಯ ಮೇರೆಗೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎ.ಟಿ.ಪೂವಯ್ಯ ಮಾರ್ಗ ದರ್ಶನ ದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಸಿನ್ ಪಾಷÀ, ವಲಯ ಅರಣ್ಯ ಅಧಿಕಾರಿಗಳಾದ ಮಧುಸೂದನ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂದಿಸಿ ಸಾವಿರಾರು ರೂಪಾಯಿ ಮೌಲ್ಯದ ತೇಗದ ಮರದ ನಾಟವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಜೇಂದ್ರ ಕುಮಾರ್, ಸಿಬ್ಬಂದಿಗಳಾದ ಜನಾರ್ದನ, ಪುನೀತ್ ಜಯರಾಮ್, ಮನೋಹರ್ ವಾಹನ ಚಾಲಕ. ಭರತ್ ಪಾಲ್ಗೊಂಡಿದ್ದರು.