ಮುಳ್ಳೂರು, ಡಿ. ೨೫: ಶನಿವಾರಸಂತೆ ಟೌನ್ ಫೀಡರ್‌ನಲ್ಲಿ ಹಳೆ ವಯರ್‌ನ್ನು ಬದಲಾಯಿಸಿ ಹೊಸ ಕಂಡಕ್ಟರ್ ಅನ್ನು ಹಾಕುವ ಕಾಮಗಾರಿ ನಿಮಿತ್ತ ಡಿ ೨೬ ರಂದು ಭಾನುವಾರ ಬೆಳಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯ ವರೆಗೆ ಶನಿವಾರಸಂತೆ ಟೌನ್ ಫೀಡರ್‌ಗೆ ಒಳಪಡುವ ಗುಡುಗಳಲೆ ಜಂಕ್ಸನ್ ಹೊರತು ಪಡಿಸಿದಂತೆ ಹೆಮ್ಮನೆ, ಬಿದರೂರು ಕೆಆರ್‌ಸಿ ವೃತ್ತ, ಗುಂಡೂರಾವ್ ಬಡಾವಣೆ, ತ್ಯಾಗರಾಜ ಕಾಲೋನಿ, ಚಿಕ್ಕಕೊಳತ್ತೂರು, ಮಾದ್ರೆ, ಶೆಟ್ಟಿಗನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತಯವಾಗಲಿದ್ದು ಹಾಗೂ ಸದರಿ ಕಾಮಗಾರಿ ಮುಗಿಯುವವರೆಗೆ ಶನಿವಾರಸಂತೆ ಟೌನ್ ವ್ಯಾಪ್ತಿಯಲ್ಲಿ ಮುಂದಿನ ೧೫ ದಿನಗಳವರೆಗೆ ಅಗ್ಗಾಗ್ಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಶನಿವಾರಸಂತೆ ಸೆಸ್ಕ್ ಶಾಖಾ ಕಚೇರಿಯ ಕಿರಿಯ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.