ಸುಂಟಿಕೊಪ್ಪ, ಡಿ. ೨೪: ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ೫೧ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆಯು ತಾ. ೨೬ ರಂದು ನಡೆಯಲಿದೆ.
ಅಂದು ಪೂರ್ವಾಹ್ನ ೬.೪೫ ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ೭.೧೫ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, ಪೂರ್ವಾಹ್ನ ೭.೩೦ ಗಂಟೆಗೆ ಚಂಡೆಮೇಳ, ೯ ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ, ಅಪರಾಹ್ನ ೧೨ ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಮಧ್ಯಾಹ್ನದ ಪೂಜೆ, ೧೨.೩೦ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ-ಪಲ್ಲಪೂಜೆ, ೧೨.೪೫ಕ್ಕೆ ಗಂಭೀರಪಟಾಕಿ, ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದೂರ್ವಾರ್ಚನೆ ೧೦ ರಿಂದ ೪ ರವರೆಗೆ ನಡೆಯಲಿದೆ.
ಸಂಜೆ ೭.೩೦ ಕ್ಕೆ ದುರ್ಗಾ ಪೂಜೆ ನಡೆಯಲಿದ್ದು ಅನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸುರೇಶ್ ಗೋಪಿ, ಪದಾಧಿಕಾರಿಗಳು ತಿಳಿಸಿದ್ದಾರೆ.