ಭಾಗಮಂಡಲ, ಡಿ. ೨೪: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಹಲವು ವರ್ಷಗಳಿಂದ ಕ್ಷೇತ್ರದ ತಳಭಾಗದಲ್ಲಿ ಟೀ ಅಂಗಡಿ ಹಾಗೂ ಇತರ ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದವು. ಇತ್ತೀಚೆಗೆ ಪಾರ್ಕಿಂಗ್ ಪ್ರದೇಶದಲ್ಲಿ ಅಂಗಡಿ ಮಳಿಗೆಗಳನ್ನು ಸ್ಥಳಾಂತರಿಸಲು ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಕೆಳಭಾಗಕ್ಕೆ ಸ್ಥಳಾಂತರಿಸಲಾಯಿತು. ಗ್ರಾಮ ಪಂಚಾಯಿತಿಯಿAದ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಡಲಾಯಿತು

ಆದರೆ ಗೇಟ್ ಪಕ್ಕದಲ್ಲಿ ಮಹಿಳೆಯೊಬ್ಬಳು ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಗುಡಿಸಲು ಕಟ್ಟಿ ಅಂಗಡಿ ನಿರ್ಮಿಸಿಕೊಂಡು ಬಂದಿದ್ದು ಈ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂಗಡಿಯನ್ನು ತೆರವುಗೊಳಿಸುವಂತೆ ಮಹಿಳೆಗೆ ಗ್ರಾಮ ಪಂಚಾಯಿತಿಯಿAದ ಮೂರು ಬಾರಿ ನೋಟಿಸ್ ಜಾರಿಮಾಡಿ ಸೂಚಿಸಲಾಗಿತ್ತು. ಗ್ರಾಮ ಪಂಚಾಯಿತಿ ನೋಟಿಸ್ ನೀಡಿದ್ದಲ್ಲದೆ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಮಳಿಗೆಯೊಂದರಲ್ಲಿ ಅಂಗಡಿ ನಡೆಸುವಂತೆ ಮನವಿ ಮಾಡಿತ್ತು. ಯಾರ ಮನವಿಗೂ ಕಿವಿಗೊಡದೆ ಮಹಿಳೆ ಅಂಗಡಿಯಲ್ಲಿ ವಹಿವಾಟು ಮುಂದುವರಿಸಿದ್ದು ಸ್ವತ ಠಾಣಾಧಿಕಾರಿ ತೆರಳಿ ಮನವೊಲಿಸಲು ಯತ್ನಿಸಿದರೂ ಪೊಲೀಸ್ ಅಧಿಕಾರಿ ಎದುರು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಗ್ರಾಮ ಪಂಚಾಯಿತಿಗೆ ಬೆದರಿಕೆ ಹಾಕಿದ್ದಾರೆ .ಜೊತೆಗೆ ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುವುದು ಎಂದು ಕಾದು ನೋಡಬೇಕಾಗಿದೆ. ಮಹಿಳೆಯೋರ್ವಳ ಹೆದರಿಕೆಯಿಂದ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ತಲ್ಲಣಗೊಂಡಿದ್ದಾರೆ.

-ಸುನಿಲ್ ಕುಯ್ಯಮುಡಿ