ಗೋಣಿಕೊಪ್ಪ ವರದಿ, ಡಿ. ೨೩ : ಗೋಣಿಕೊಪ್ಪದಲ್ಲಿರುವ ಜನಪದ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ತಾ. ೨೬ ರಂದು ಆಯೋಜಿಸಲಾಗಿದೆ ಎಂದು ಸಂಘದ ನಿರ್ದೇಶಕ ಬಿ. ವೈ. ಆನಂದರಘು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಲಿದ್ದಾರೆ. ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಅರಮೇರಿ ಕಳಂಚೇರಿ ಮಠ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಎಂಎಲ್‌ಸಿ ಸುಜಾ ಕುಶಾಲಪ್ಪ, ಜನಪದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಿಲ್ವಾಡಿ ಶೇಖರ್ ಭಂಡಾರಿ, ತುಳುವೆರೆ ಜನಪದ ಕೂಟ ಜಿಲ್ಲಾಧ್ಯಕ್ಷ ಬಿ. ಓ. ಐತಪ್ಪ ರೈ, ಶಕ್ತಿ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ತುಳು ಅಕಾಡೆಮಿ ರಾಜ್ಯ ಅಧ್ಯಕ್ಷ ದಯಾನಂದ್, ಜಿ, ಕತ್ತಲ್‌ಸರ್, ಗೋಣಿಕೊಪ್ಪ ಗ್ರಾ. ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್, ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಆನಂದರಘು, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಸಹಕಾರ ಸಂಘಗಳ ಉಪನಿಬಂಧಕ ಸಲೀಂ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸುಮಾರು ೬೦೦ ಸದಸ್ಯರನ್ನು ಸಂಘ ಹೊಂದಿದ್ದು, ಬ್ಯಾಂಕ್ ವ್ಯವಸ್ಥೆ ಮಾಡಲಾಗಿದೆ ಎಂದರು. ಜನಪದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಿಲ್ವಾಡಿ ಶೇಖರ್ ಭಂಡಾರಿ ಮಾತನಾಡಿ, ಎಲ್ಲಾ ವರ್ಗದ ಜನರಿಗೂ ಸಂಘದ ಸದಸ್ಯತ್ವ ದೊರೆಯಲಿದೆ. ಬ್ಯಾಂಕ್ ಸೇವೆಯನ್ನು ಕೂಡ ನೀಡಲಾಗುತ್ತದೆ. ಉತ್ತಮ ಸೇವೆ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಕೆ. ಜಿ. ರಾಮಕೃಷ್ಣ, ಕಾರ್ಯದರ್ಶಿ ಸುಜಿನಿ, ನಿರ್ದೇಶಕಿ ಸಂಧ್ಯಾ ಇದ್ದರು.