ಕೂಡಿಗೆ, ಡಿ. ೨೩: ಮೈಸೂರಿನ ಓಡಿಪಿ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಅರ್ಥಿಕ ನೆರವು ಮತ್ತು ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಸಂಸ್ಥೆಯ ೩೮ ನೇ ವರ್ಷಾಚರಣೆ ಪ್ರಯುಕ್ತ ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೂಡುಮಂಗಳೂರು ಭಾಗದ ಕ್ಯಾನ್ಸರ್ ಪೀಡಿತ ಈರ್ವರಿಗೆ ಮೈಸೂರಿನ ಧರ್ಮಾಧ್ಯಕ್ಷರಾದ ಡಾ. ಕೆ.ಎಂ. ವಿಲಿಯಂನವರು ಹಾಗೂ ಓಡಿಪಿ ಸಂಸ್ಥೆಯ ನಿರ್ದೇಶಕ ಸ್ವಾಮಿ ಆಲೆಕ್ಸ್ ಪ್ರಶಾಂತ ವಿತರಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಮೈಸೂರಿನ ಕಾರ್ಯಕ್ರಮ ಸಂಯೋಜಕ ಜಾರ್ನ್ ಡಿಗ್ಲೋಸ್ ಮತ್ತು ಕಾರ್ಯಕರ್ತ ಸುಂದರ್ ದಾಸ್ ಇದ್ದರು.