ಮಡಿಕೇರಿ, ಡಿ. ೨೪: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಕಾಲ ಮಿತ್ರರನ್ನು ನೇಮಕ ಮಾಡುವ ಸಂಬAಧ ಸಕಾಲ ಮಿಷನ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕರ್ನಾಟಕ ತಯಾರಿ ನಡೆಸಿದೆ.

ರಾಜ್ಯದ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ೨೦೧೨ ರಲ್ಲಿ ಪ್ರಾರಂಭಿಸಲಾದ ಸಕಾಲ ಯೋಜನೆಯಲ್ಲಿ ಪ್ರಸ್ತುತ ೯೯ ಇಲಾಖೆಗಳ/ ಸಂಸ್ಥೆಗಳ ೧೧೧೫ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ. ಆದಾಗ್ಯೂ ನಾಗರಿಕರಲ್ಲಿ ಸಕಾಲ ಸೇವೆಗಳ ಕುರಿತು ಪೂರ್ಣ ಮಾಹಿತಿ/ ವಿವರ ಲಭ್ಯವಿರುವುದಿಲ್ಲ.

ಆದ್ದರಿಂದ ನಾಗರಿಕರಲ್ಲಿ ಸಕಾಲ ಯೋಜನೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಆಸಕ್ತಿ ಇರುವ ವ್ಯಕ್ತಿಗಳನ್ನು ಯಾವುದೇ ಶೈಕ್ಷಣಿಕ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮುಖಾಂತರ ‘ಸಕಾಲ ಮಿತ್ರ’ರನ್ನು ನೇಮಕ ಮಾಡಿಕೊಳ್ಳುವಂತೆ ಅಪರ ಸಕಾಲ ಮಿಷನ್ ನಿರ್ದೇಶಕರು ತಿಳಿಸಿದ್ದಾರೆ.

ಸಕಾಲ ಮಿತ್ರ ಯೋಜನೆಗೆ ಆಸಕ್ತಿಯುಳ್ಳ ಯಾವುದೇ ಶೈಕ್ಷಣಿಕ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳು ತಾ. ೩೧ ರೊಳಗೆ ಜಿಲ್ಲಾಧಿಕಾರಿ ಅವರ ಕಚೇರಿಯನ್ನು ಸಂಪರ್ಕಿಸುವುದು. ಈ ಯೋಜನೆಯಡಿ ಯಾವುದೇ ರೀತಿಯ ಆರ್ಥಿಕ ಬಾಧ್ಯತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಸಂದೇಶ್ ಎಚ್.ಎಸ್., ಸಕಾಲ ಸಮಾಲೋಚಕರು, ಜಿಲ್ಲಾಧಿಕಾರಿ ಅವರ ಕಚೇರಿ, ಕೊಡಗು ಜಿಲ್ಲೆ ಇವರನ್ನು ಮೊ.ಸಂ. ೯೫೯೧೭೯೩೬೬೦ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.