ಸೋಮವಾರಪೇಟೆ, ಡಿ. ೨೪: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಪೂಕಳಂ ಸ್ಪರ್ಧೆಯ ವಿಜೇತರಿಗೆ ಸಂಘದ ಅಧ್ಯಕ್ಷ ವಿ. ಎಂ. ವಿಜಯ ಅವರು ಬಹುಮಾನ ವಿತರಿಸಿದರು. ಸ್ಪರ್ಧೆ ಯಲ್ಲಿ ತಾಲೂಕಿನ ವಿವಿಧ ಭಾಗ ಗಳಿಂದ ತಂಡಗಳು ಪಾಲ್ಗೊಂಡಿದ್ದವು. ಬಗೆಬಗೆಯ ಹೂವುಗಳಿಂದ ನಿರ್ಮಾಣಗೊಂಡಿದ್ದ ‘ಪೂಕಳಂ’ ಎಲ್ಲರ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವನ್ನು ಪೂಜಿತ ಹಾಗೂ ದ್ವಿತೀಯ ಬಹುಮಾನವನ್ನು ಅಜೀಶ್ ಮತ್ತು ತಂಡದವರು ಪಡೆದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಅಜೀಶ್, ಎನ್.ಎನ್. ದಯಾನಂದ್, ವಿನೋದ್‌ಕುಮಾರ್, ಶಿವದಾಸನ್ ಮತ್ತಿತರರು ಉಪಸ್ಥಿತರಿದ್ದರು.