ಕುಶಾಲನಗರ, ಡಿ.೨೪: ಕುಶಾಲನಗರ ಪ್ರಸ್ತಾವಿತ ಪುರಸಭೆ ನೂತನ ಕಚೇರಿಗೆ ರೂ. ೨.೮೭ ಕೋಟಿ ವೆಚ್ಚದಲ್ಲಿ ನೀಲನಕ್ಷೆ ತಯಾರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಯವರ್ಧನ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಈಗಾಗಲೇ ೫.೯೭ ಕೋಟಿ ವೆಚ್ಚದಲ್ಲಿ ಪಂಚಾಯತ್ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದೆ. ಪುರಸಭೆ ಪ್ರಸ್ತಾವನೆ ಸಲ್ಲಿಕೆ ಸಂದರ್ಭ ಸರ್ಕಾರಕ್ಕೆ ಪ್ರಸ್ತಾವಿತ ಪುರಸಭೆ ಕಚೇರಿಗೂ ಆಡಳಿತ ಮಂಡಳಿ ಮೂಲಕ ಈ ಹಿಂದೆ ನೀಲನಕ್ಷೆ ಸಲ್ಲಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಪುರಸಭೆಗೆ ಸಂಬAಧಿಸಿದ ದಾಖಲೆಗಳನ್ನು ಇತ್ತೀಚೆಗೆ ಪೌರಾಡಳಿತ ನಿರ್ದೇಶನಾಲಯದ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು ಮಡಿಕೇರಿ ಕ್ಷೇತ್ರ ಶಾಸಕ ಎಂ ಪಿ ಅಪ್ಪಚ್ಚುರಂಜನ್ ಅವರ ಮುತುವರ್ಜಿಯಲ್ಲಿ ಕುಶಾಲನಗರ ಪುರಸಭೆಗೆ ಗ್ರೀನ್ ಸಿಗ್ನಲ್ ದೊರಕಿರುವುದು ಸಂತಸದ ವಿಷಯ ಎಂದರು.