ಮಡಿಕೇರಿ, ಡಿ.೨೪: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿ ಭಾರತೀಯ ಸೇನೆ ಹಾಗೂ ಜನರಲ್ ತಿಮ್ಮಯ್ಯ ಅವರ ಜೀವನಕ್ಕೆ ಸಂಬAಧಪಟ್ಟAತೆ ಅಪರೂಪದ ವಸ್ತುಗಳ ಮಳಿಗೆ ತೆರೆಯಲು ಸ್ಮಾರಕ ಭವನ ಸಮಿತಿಯಲ್ಲಿ ತೀರ್ಮಾನಿಸಲಾಗಿದ್ದು, ಮಳಿಗೆಯನ್ನು ತೆರೆಯಲು ಇಚ್ಚಿಸುವವರು ಮಾರಾಟ ಮಾಡುವ ವಸ್ತುಗಳ ಬಗ್ಗೆ ವಿವರ ಹಾಗೂ ಅವುಗಳ ದರ ಪಟ್ಟಿಯೊಂದಿಗೆ ಜನವರಿ ೫ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ಇಲ್ಲಿ ಸಂಪರ್ಕಿಸಬಹುದು.

ಮಳಿಗೆಯಿಂದ ಬರುವ ಆದಾಯದ ಹಣಕಾಸಿನ ಲೆಕ್ಕ ಪತ್ರಗಳ ವ್ಯವಹಾರಗಳು ಸ್ಮಾರಕ ಭವನ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ತಿಳಿಸಿದ್ದಾರೆ.