ಗೋಣಿಕೊಪ್ಪ ವರದಿ, ಡಿ. ೨೪ ; ಬೈತೂರು ನಮ್ಮೆ ಪ್ರಯುಕ್ತ ತಾ. ೩೦ ರಂದು ಕೇರಳದ ಉಳಿಕಲ್ ಬೈತೂರು ಕ್ಷೇತ್ರದಿಂದ ಜಿಲ್ಲೆಗೆ ಕೋಮರತ್ತಚ್ಚನ್ ಆಗಮಿಸಲಿದ್ದಾರೆ ಎಂದು ಪುಗ್ಗೇರ ಕುಟುಂಬ ತಕ್ಕರಾದ ಪುಗ್ಗೇರ ಎ. ಪೊನ್ನಪ್ಪ ತಿಳಿಸಿದ್ದಾರೆ.
ಕೋಮರತಚ್ಚನ್ ಬರುವ ಸಂದರ್ಭ ಆಯಾ ದೇವಸ್ಥಾನ, ಗ್ರಾಮದ ಪ್ರಮುಖರಿಗೆ ಮಾಹಿತಿ ನೀಡಲಾಗುವುದು. ಭಕ್ತಿಪೂರ್ವಕವಾಗಿ ಆಚರಣೆಯ ಮಹತ್ವ ಕಾಪಾಡಿಕೊಳ್ಳಬೇಕು. ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.