ಗಾಳಿಬೀಡು, ಡಿ. ೨೪: ಇಲ್ಲಿಗೆ ಸನಿಹದ ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತಮಹೋತ್ಸವ)ದ ಅಂಗವಾಗಿ ರಾಷ್ಟçಪಿತ ಮಹಾತ್ಮಾಗಾಂಧೀಜಿಯವರ ಉದ್ದೇಶಿತ ಪ್ರತಿಮೆ ಪ್ರತಿಷ್ಠಾಪನೆಯ ಭೂಮಿಪೂಜೆ ನಡೆಯಿತು. ಮೂರ್ತಿ ನಿರ್ಮಾಣದ ಜೊತೆಗೆ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಮೂರ್ತಿ ರಚನೆಯ ಪ್ರಾಥಮಿಕ ಅಂಶಗಳನ್ನು ತಿಳಿಸಿಕೊಡುವ ಕಾರ್ಯಾಗಾರದ ಉದ್ಘಾಟನೆಯೂ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಲಯದ ಪ್ರಾಚಾರ್ಯರು ೧೫-೨೦ ದಿನಗಳ ಅವಧಿ ಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮೂರ್ತಿ ನಿರ್ಮಾಣ ಕಾರ್ಯ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣದ ಅರಿವು ಮೂಡುವುದೆಂದು ಹೇಳಿದರು. ಮೂರ್ತಿ ನಿರ್ಮಾಣ ಮತ್ತು ಕಾರ್ಯಾಗಾರವನ್ನು ಶಿಲ್ಪಕಲಾವಿದ ಸಂದೀಪ್ ಅವರು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಕೊಡುವು ದಾಗಿ ಭರವಸೆ ನೀಡಿದರು. ಕಾರ್ಯಕ್ರಮವನ್ನು ಮಾರುತಿ ದಾಸಣ್ಣನವರ್ ನಡೆಸಿಕೊಟ್ಟರು. ಗಣೇಶ ಹೆಗಡೆ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿ ಗಳಾದ ಅನನ್ಯ ಮತ್ತು ವಿಂಧ್ಯಾ ಪ್ರಾರ್ಥಿಸಿದರು.