ಕುಶಾಲನಗರ, ಡಿ. ೨೪: ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಹಿಂದೂ ಯುವವಾಹಿನಿ ಸಹಯೋಗ ದೊಂದಿಗೆ ಬಾಂಗ್ಲಾ ವಿಮೋಚನಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಕುಶಾಲನಗರ ಗಣಪತಿ ದೇವಾಲಯದ ಮುಂಬಾಗ ಸೇರಿದ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ರಾಷ್ಟçಧ್ವಜ ಹಿಡಿದು ದೇಶ ಮತ್ತು ಯೋಧರ ಪರ ಘೋಷಣೆ ಕೂಗಿದರು.
ಹಿಂದೂ ಜಾಗರಣಾ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ. ಹರೀಶ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಯೋಧರಾದ ಕೆ. ಎಂ. ಪೂವಯ್ಯ, ಎಂ. ಶ್ರೀಧರನ್, ಟಿ.ಎಲ್ಲಿಯಣ್ಣ ಅವರುಗಳನ್ನು ಸನ್ಮಾನಿಸಿದರು. ವೇದಿಕೆಯ ಪ್ರಮುಖರಾದ ಚೇತನ್ ಜೀವನ್ ಅಕ್ಷಯ್ ಮತ್ತಿತರರು ಇದ್ದರು.