ಸೋಮವಾರಪೇಟೆ,ಡಿ.೨೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿAದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ೯ ದಿನ ಪೂರೈಸಿದೆ. ಪಟ್ಟಣದ ಜೇಸೀ ವೇದಿಕೆಯಲ್ಲಿ ನಡೆಯುತ್ತಿರುವ ಧರಣಿಗೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
ಧರಣಿಯಲ್ಲಿ ಭಾಗವಹಿಸಿದ ರೈತ ಮುಖಂಡ ಜಿ.ಎಂ. ಹೂವಯ್ಯ ಮಾತನಾಡಿ, ಕೃಷಿ ಬೆಳೆ ಹಾಗೂ ಕಾಫಿಯನ್ನು ಬೆಳೆಯಲು ಉಪಯೋಗಿಸುವ ಕೊಳವೆ ಬಾವಿಯ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸುವುದು ರೈತರ ಕುತ್ತಿಗೆ ಹಿಸುಕಿ ಕೊಂದAತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಕೃಷಿಕ ಉಮಾಶಂಕರ್, ಶನಿವಾರಸಂತೆ ಸಣ್ಣ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು, ಕೂಗೂರು, ಗೌಡಳ್ಳಿ, ಅಜ್ಜಳ್ಳಿ, ಕೊಡ್ಲಿಪೇಟೆ, ಚಿಕ್ಕಾರ, ಐಗೂರು, ಗಣಗೂರು, ಶಾಂತಳ್ಳಿ, ಕಿರಗಂದೂರು ಸೇರಿದಂತೆ ವಿವಿಧ ಗ್ರಾಮಗಳಿಂದ ರೈತ ಪ್ರತಿನಿಧಿಗಳು ಧರಣಿಯಲ್ಲಿ ಭಾಗವಹಿಸಿದ್ದರು. ಪ್ರಗತಿಪರ ರೈತರಾದ ಕೆ.ಎಂ.ಲೋಕೇಶ್, ಬಿ.ಬಿ.ಸತೀಶ್, ಅಜ್ಜಳ್ಳಿ ನವೀನ್, ಶರತ್‌ಶೇಖರ್, ವಿ.ಎನ್.ದೇವರಾಜ್, ಡಿ.ಬಿ.ಧರ್ಮಪ್ಪ, ಎಚ್.ಪಿ.ಧರ್ಮಪ್ಪ, ಸಿ.ಬಿ.ಪ್ರಸನ್ನ, ಬಿ.ಎಂ. ಮೊಗಪ್ಪ,ಬಿ.ಪಿ.ಅನಿಲ್ ಮತ್ತಿತರ ಪ್ರಮುಖರು ಇದ್ದರು.