ಕಣಿವೆ, ಡಿ. ೨೧: ವಿಶೇಷಚೇತನರೆಂದರೆ ಅವರೊಬ್ಬ ಅಸಹಾಯಕರು, ನಿರ್ಲಕ್ಷಿತರು ಎಂಬ ಭಾವನೆ ಹಲವರಲ್ಲಿರುತ್ತದೆ. ಆದರೆ ಇದಕ್ಕೆ ಅಪವಾದ ಕುಶಾಲನಗರದ ಕಾವೇರಿ ನದಿ ದಂಡೆಯ ದೊಡ್ಡಹೊಸೂರು ಎಂಬ ಗ್ರಾಮದಲ್ಲಿರುವ ವಿಶೇಷಚೇತನ ಆಟೋ ಚಾಲಕ ೩೮ರ ಪ್ರಾಯದ ಮಹದೇವ ಎಂಬ ವ್ಯಕ್ತಿ ಅಂಗವೈಕಲ್ಯದಿAದ ಬಳಲುತ್ತಿದ್ದರೂ ಕೂಡ ಎಲ್ಲವನ್ನೂ ಮೀರಿದ ಸಾಮಾಜಿಕ ಕಾಳಜಿ ಮೈಗೂಡಿಸಿಕೊಂಡು ಮಾದರಿಯಾಗಿದ್ದಾರೆ.
ದೊಡ್ಡಹೊಸೂರು ಗ್ರಾಮದ ಈಶ್ವರಪ್ಪ ಎಂಬವರ ಏಳು ಮಂದಿ ಮಕ್ಕಳ ಪೈಕಿ ಐದನೆಯವರಾದ ಮಹದೇವ ೫ ವರ್ಷವಿದ್ದಾಗ ಬಾಧಿಸಿದ ಜ್ವರ ಹಾಗೂ ತಲೆನೋವಿಗೆಂದು ಜಿಲ್ಲಾಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದರು ಎನ್ನಲಾಗಿದೆ. ಬಳಿಕ ಆ ಲಸಿಕೆ ಮಹದೇವ ಅವರಿಗೆ ವ್ಯತಿರಿಕ್ತ ಪರಿಣಾಮ ಬೀರಿ ತೀವ್ರ ರಕ್ತಸ್ರಾವದೊಂದಿಗೆ ಸೊಂಟದ ಪೂರ್ಣ ಕೆಳ ಭಾಗ ಊನವಾಗತೊಡಗಿತು.
ಬಳಿಕ ತನ್ನ ಜೀವನಕ್ಕೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯೊAದನ್ನು ಇಟ್ಟುಕೊಂಡಿದ್ದರು. ಬಳಿಕ ಅಂಗಡಿಗೆ ಸಾಮಾನು ತರಲು ಕುಶಾಲನಗರ ಪಟ್ಟಣಕ್ಕೆ ಆಗಿಂದಾಗ್ಗೆ ಅಡ್ಡಾಡಲು ಮೂರು ಚಕ್ರದ ವಾಹನವೊಂದನ್ನು ಸಿದ್ಧಪಡಿಸಿಕೊಂಡು ಸಂಚರಿಸುತ್ತಿದ್ದರು.
ಬಳಿಕ ಕಳೆದ ೧೨ ವರ್ಷದ ಹಿಂದೆ ಮೂರು ಚಕ್ರದ ವಾಹನದ ಬದಲಾಗಿ ಸ್ವತಃ ತಾವೇ ಸಂಪಾದಿಸಿದ ೫೦ ಸಾವಿರ ಹಣವನ್ನು ವ್ಯಯಿಸಿ ಆಟೋವೊಂದನ್ನು ಖರೀದಿಸಿದ್ದಾರೆ. ಬಳಿಕ ಆ ಆಟೋಗೆ ಬ್ರೇಕ್ ಹಾಕಲು ಕಾಲಿಂದ ಸಾಧ್ಯವಾಗದ ಕಾರಣ ಕಾಲು ಗೇರಿನ ಬದಲಾಗಿ ಕೈಯಿಂದ ಬ್ರೇಕ್ ಹಾಕುವ ವ್ಯವಸ್ಥೆಯನ್ನು ವಿಶೇಷವಾಗಿ ತಮ್ಮ ಆಟೋದಲ್ಲಿ ಅಳವಡಿಸಿಕೊಂಡಿದ್ದಾರೆ.
ನAತರ ಆಟೋ ಸಂಚಾರ ಸುಗಮವಾದೊಡನೆ, ಚಿಲ್ಲರೆ ಅಂಗಡಿಯನ್ನು ತಮ್ಮ ತಂದೆಗೆ ವಹಿಸಿದ ಮಹದೇವ, ತನ್ನ ಜೀವನ ಬಂಡಿಯ ಸುಗಮಕ್ಕೆ ಸಂಪೂರ್ಣವಾಗಿ ಆಟೋವನ್ನೇ ಅವಲಂಬಿಸಿದ್ದಾರೆ.
ಸ್ವಾವಲAಬಿ ಬದುಕಿನೊಂದಿಗೆ ಸಮಾಜ ಸೇವೆ
ಊರಲ್ಲಿ ಇರುವಾಗ ಊರಿನಿಂದ ಪೇಟೆಗೆ ಶಾಲೆಗೆ ಹೋಗುವ ಮತ್ತು ಮನೆಗೆ ಬರುವ ಮಕ್ಕಳನ್ನು ಕನಿಷ್ಟ ೬ ಕಿ.ಮೀ. ತನಕ ಕೇವಲ ೧೦ ರೂ. ಪಡೆದುಕೊಂಡು ಬಿಡುತ್ತೇನೆ.
ಕೆಲವು ಜನ ನನ್ನನ್ನೇ ಬಾಡಿಗೆಗೂ ಕರೆಯುತ್ತಾರೆ. ಯಾವ ಹೊತ್ತಿನಲ್ಲೂ ಬೇಕಾದರೂ ನಾನು ಕುಶಾಲನಗರಕ್ಕೆ ಹೋಗಿ ಬರುತ್ತೇನೆ. ಅಂಗವೈಕಲ್ಯ ಇದೆ ಎಂದುಕೊAಡು ಯಾರ ಬಳಿಯೂ ಕೈಚಾಚುವುದಿಲ್ಲ. ಯಾರ ಮುಂದೆಯೂ ತಲೆಬಾಗುವುದಿಲ್ಲ. ದೇವರು ದೇಹದಲ್ಲಿ ಶಕ್ತಿ ಕೊಟ್ಟಿರುವ ತನಕ ಕಷ್ಟಪಟ್ಟು ಆಟೋ ಬಾಡಿಗೆ ಮಾಡಿ ದುಡಿಯುತ್ತೇನೆ ಎಂದು ಮಹದೇವ ಗರ್ವದಿಂದ ಹೇಳುತ್ತಾರೆೆ.
ಮಕ್ಕಳ ಮೇಲೆ ಪ್ರೀತಿ ಜಾಸ್ತಿ
ನನಗೆ ಶಾಲೆಗೆ ಹೋಗೋ ಮಕ್ಕಳೆಂದರೆ ಪ್ರೀತಿ ಜಾಸ್ತಿ. ಏಕೆಂದರೆ ಹಣವುಳ್ಳವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಹೆಚ್ಚು ಹಣ ಪಾವತಿಸಿ ಸೇರಿಸುತ್ತಾರೆ. ಸ್ವಂತ ವಾಹನಗಳಲ್ಲಿ ಬಿಡುತ್ತಾರೆ. ಆದರೆ ಬಡ ಕುಟುಂಬಗಳ ಕೂಲಿಕಾರರ ಮಕ್ಕಳಿಗೆ ಕೆಲವು ವೇಳೆ ಹತ್ತು ರೂ. ಕೂಡ ಇರಲ್ಲ. ಇತ್ತೀಚೆಗೆ ಇಂಧನ ಬೆಲೆಗಳು ದುಪ್ಪಟ್ಟಾದ ಬಳಿಕ ಆಟೋದವರೆಲ್ಲಾ ದರ ಹೆಚ್ಚಿಸಿದ್ದಾರೆ. ಹಾಗಾಗಿ ಮಕ್ಕಳು ಒಂದೊAದು ರೂ.ಗೆ ಪರದಾಡೋದನ್ನು ಕಂಡಿದ್ದೇನೆ. ಆಟೋಗೆ ಕೊಡಲು ಹಣವಿಲ್ಲದೇ ದೂರ ದೂರ ಕ್ರಮಿಸುವ ಮಕ್ಕಳನ್ನೂ ನಾನು ನೋಡಿದ್ದೇನೆ. ಹಾಗಾಗಿ ನಾನು ಶಾಲೆ ಮಕ್ಕಳಿಗೆ ಕೇವಲ ಹತ್ತು ರೂ. ನಿಗದಿಪಡಿಸಿದೆ. ಇದು ಮಕ್ಕಳಿಗೆ ಗೊತ್ತಾಗಲಿ ಅಂತಾ ಆಟೋದಲ್ಲೂ ಬರೆಸಿಕೊಂಡಿದ್ದೇನೆ. ಹಾಗೆಯೇ ಮಕ್ಕಳು ಕೂಡ ನಾನು ಅಂದರೆ ಆಟೋ ಮಾವ ಅಂತಾ ಪ್ರೀತಿಯಿಂದ ಓಡೋಡಿ ಬರುತ್ತವೆ. ಸಾಕಲ್ವ ಇದಕ್ಕಿಂತ ಇನ್ನೇನು ಬೇಕು ಎಂಬ ಆತ್ಮತೃಪ್ತಿ ಇದೆ. ತಾನು ವಿಶೇಷಚೇತನ ಚಾಲಕನಾಗಿದ್ದರೂ ಕೂಡ ಸಂಚಾರಿ ನಿಯಮಗಳನ್ನು ಗೌರವಿಸುತ್ತೇನೆ. ಹಾಗಾಗಿ ಕುಶಾಲನಗರ ಹಾಗೂ ಬೈಲಕೊಪ್ಪ ಪೊಲೀಸರು ನನಗೆ ಯಾವತ್ತೂ ಕೂಡ ತೊಂದರೆ ಕೊಟ್ಟಿಲ್ಲ. ಹಾಗೆಯೇ ನಮ್ಮ ಆಟೋ ಚಾಲಕರು ಕೂಡ ನನಗೆ ಸಹಕಾರ ಕೊಡುವುದರಿಂದಲೇ ಕುಶಾಲನಗರ, ಕೊಪ್ಪ ಎಲ್ಲಾ ಕಡೆ ಆಟೋ ನಿಲ್ಲಿಸಿಕೊಂಡು ಟ್ರಿಪ್ ಮಾಡುತ್ತೇನೆ ಎಂದು ಮಹದೇವ್ ಹೇಳುತ್ತಾರೆ.
ನಂಜನಗೂಡು ನವಿಲೂರಿನ ಬಡ ಕುಟುಂಬದಲ್ಲಿದ್ದ ವಿಶೇಷಚೇತನ ಯುವತಿ ನಾಗಮಣಿ ಎಂಬವರನ್ನು ವಿವಾಹವಾಗಿರುವ ಈ ಮಹದೇವನಿಗೆ ಎರಡು ವರ್ಷದ ಒಬ್ಬ ಪುತ್ರ ಹಾಗೂ ಒಂಭತ್ತು ವರ್ಷದ ಒಬ್ಬಳು ಪುತ್ರಿ ಇದ್ದಾರೆ.
ಪತ್ನಿ ನಾಗಮಣಿಗೆ ಮಾತು ಬರುವುದಿಲ್ಲ ಹಾಗೂ ಕಿವಿ ಕೇಳಿಸುವುದಿಲ್ಲ. ಈಗ ನಮ್ಮಿಬ್ಬರಿಗೆ ಜನಿಸಿರುವ ಮಕ್ಕಳು ಆರೋಗ್ಯದಿಂದ ಇದ್ದಾರೆ. ಚೆಂದ ಮಾತಾಡ್ತಾರೆ. ಓಡಾಡ್ತಾರೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ನನಗೆ ಅಂಗವೈಕಲ್ಯ ಇದೆ ಎಂಬ ಕಿಂಚಿತ್ತು ಕೊರಗು ಇಲ್ಲ. ದೇವರ ದಯೆಯಿಂದ ನನಗೆ ನನ್ನ ಆಟೋ ಎಲ್ಲವನ್ನು ಕೊಟ್ಟಿದೆ. ದಿನಂಪ್ರತೀ ಆಟೋದಲ್ಲಿ ಒಳ್ಳೆಯ ಸಂಪಾದನೆ ಆಗುತ್ತಿದೆ. ಹಾಗಾಗಿ ನಮ್ಮ ಕುಟುಂಬ ಎಲ್ಲೇ ಹೋಗಬೇಕಾದ ಅಗತ್ಯ ಬಂದರೆ ಆಟೋದಲ್ಲೇ ಎಲ್ಲರೂ ಒಟ್ಟಾಗಿ ಪ್ರಯಾಣಿಸುತ್ತೇವೆ ಎನ್ನುತ್ತಾರೆ.
ಏನೇ ಇರಲಿ, ಅಂಗವೈಕಲ್ಯತೆ ಮೆಟ್ಟಿ ನಿಂತು ಸ್ವಾಭಿಮಾನದ ಬದುಕು ಕಟ್ಟುವ ಮೂಲಕ ಶಾಲಾ ಮಕ್ಕಳಿಗೆ ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವುದು ಹಾಗೂ ವಿಶೇಷಚೇತನಳಾದ ಹೆಣ್ಣು ಮಗಳೊಬ್ಬಳಿಗೆ ಜೀವನ ಕಲ್ಪಿಸಿರುವ ಮೂಲಕ ತನ್ನ ಕೈಲಾದ ಸಾಮಾಜಿಕ ಕಾಳಜಿ ಹೊಂದಿರುವ ಈ ಆಟೋ ಮಹದೇವ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ.
-ಕೆ. ಎಸ್. ಮೂರ್ತಿ
ಕುಶಾಲನಗರ